ಇತ್ತೀಚೆಗಷ್ಟೇ ನಿರ್ದೇಶಕ ಪಿ.ಸಿ.ಶೇಖರ್, ರೊಮ್ಯಾಂಟಿಕ್ ಕಾಮಿಡಿ ಚಿತ್ರವೊಂದನ್ನು ಘೋಷಿಸಿದ್ದರು. ಡಾರ್ಲಿಂಗ್ ಕೃಷ್ಣ ಹೀರೋ ಆಗಲಿರುವ ಚಿತ್ರಕ್ಕೆ ಕಡ್ಡಿಪುಡಿ ಚಂದ್ರು ನಿರ್ಮಾಪಕ ಎಂದು ಶೇಖರ್ ಹೇಳಿದ್ದರು. ಕನ್ನಡದ ಹುಡುಗಿಯೇ ನಾಯಕಿಯಾಗುತ್ತಾರೆ ಎಂದಿದ್ದ ಪಿಸಿ, ಈಗ ಅಶಿಕಾ ರಂಗನಾಥ್ ಅವರನ್ನು ಫೈನಲ್ ಮಾಡಿದ್ದಾರೆ.
ನನ್ನ ಚಿತ್ರದ ಕಥೆಗೆ ಅಶಿಕಾ ಅವರೇ 100% ಸೂಟ್ ಆಗ್ತಾರೆ. ಹೀಗಾಗಿ ಅವರೇ ಬೇಕು ಎಂದು ಆಯ್ಕೆ ಮಾಡಿಕೊಂಡಿದ್ದೇನೆ ಎನ್ನುತ್ತಾರೆ ಪಿಸಿ. ಹೊಸ ಚಿತ್ರದ ಮುಹೂರ್ತ ಅಕ್ಟೋಬರ್ 10ರಂದು ನಡೆಯಲಿದೆ.