ಕನ್ನಡದಲ್ಲಿ 400ರಿಂದ 500 ಕೋಟಿ ಬಜೆಟ್ ಹಾಕಿ ಸಿನಿಮಾ ಮಾಡೋ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ ನಿರ್ಮಾಪಕ ಡಾ.ರಾಘವೇಂದ್ರ. ಹೀರೋ ನೆನಪಿರಲಿ. ಚಿತ್ರದ ಕಥೆ ಮತ್ತು ಟೆಕ್ನಾಲಜಿ ಹಾಲಿವುಡ್ ಲೆವೆಲ್ಲಿನಲ್ಲಿರಲಿದೆಯಂತೆ.
ನೆನಪಿರಲಿ ಪ್ರೇಮ್ ಅವರನ್ನೇ ಹಾಕಿಕೊಂಡು ಹೊಸ ಸಿನಿಮಾ ಮಾಡಲಿದ್ದೇವೆ. ಚಿತ್ರದ ಬಜೆಟ್ 400ರಿಂದ 500 ಕೋಟಿಯಾಗಬಹುದು. ಶೀಘ್ರದಲ್ಲೇ ಚಿತ್ರದ ವಿವರಗಳನ್ನು ಹೇಳಲಿದ್ದೇವೆ ಎಂದಿದ್ದಾರೆ ನಿರ್ಮಾಪಕ ರಾಘವೇಂದ್ರ.
ಸದ್ಯಕ್ಕೆ ರಾಘವೇಂದ್ರ ಪ್ರೇಮಂ ಪೂಜ್ಯಂ ಚಿತ್ರವನ್ನು ನಿರ್ದೇಶನ ಮಾಡಿದ್ದು, ಚಿತ್ರ ರಿಲೀಸ್ ಆಗುವ ಹಾದಿಯಲ್ಲಿದೆ. ಅದು ಪ್ರೇಮ್ ಅವರ 25ನೇ ಸಿನಿಮಾ. ಬೃಂದಾ ಆಚಾರ್ಯ ನಾಯಕಿಯಾಗಿರುವ ಚಿತ್ರದಲ್ಲಿ ಚೆಂದದ ಲವ್ ಸ್ಟೋರಿ ಇದೆ ಅನ್ನೋ ಮಾಹಿತಿ ಕೊಟ್ಟಿದ್ದಾರೆ ರಾಘವೇಂದ್ರ. ಚಿತ್ರತಂಡವೇನೋ ಅಕ್ಟೋಬರ್ 29ರಂದು ರಿಲೀಸ್ ಎಂದು ಘೋಷಿಸಿದೆ. ಆದರೆ, ಇದೇ ಫೈನಲ್ ಡೇಟಾ.. ಕಾದು ನೋಡಬೇಕು.