` ಬಂಧನ 2 ಸೀಕ್ವೆಲ್`ಗೆ ಎಸ್‍ವಿಆರ್ ಬಾಬು ರೆಡಿ : ಹೀರೋ ಯಾರು? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಬಂಧನ 2 ಸೀಕ್ವೆಲ್`ಗೆ ಎಸ್‍ವಿಆರ್ ಬಾಬು ರೆಡಿ : ಹೀರೋ ಯಾರು?
Aditya. Rajendra Singh Babu

ಕಥೆಯೆ ಮುಗಿದು ಹೋದರೂ.. ಮುಗಿಯದಿರಲೀ ಬಂಧನ.. ಹಾಡಿನೊಂದಿಗೇ ಡಾ.ಹರೀಶ್ ಪಾತ್ರದ ಕಥೆಯೂ ಬಂಧನದಲ್ಲಿ ಮುಗಿದಿತ್ತು. ಕ್ಲೈಮಾಕ್ಸ್‍ನಲ್ಲಿ ವಿಷ್ಣು ಪಾತ್ರದ ಅಂತ್ಯದೊಂದಿಗೆ ಮುಗಿದಿದ್ದ ಸಿನಿಮಾದ ಸೀಕ್ವೆಲ್`ಗೆ ಈಗ ಮನಸ್ಸು ಮಾಡಿದ್ದಾರೆ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು.

ಬಂಧನ ಕ್ಲೈಮಾಕ್ಸ್‍ನಲ್ಲಿ ವಿಷ್ಣು ಪಾತ್ರ ತನ್ನ ಜೀವವನ್ನೇ ನಂದಿನಿಯ ಮಗುವಿಗೆ ಧಾರೆಯೆರೆಯುತ್ತೆ. ನಂದಿನಿ ಪಾತ್ರಧಾರಿ ಸುಹಾಸಿನಿ, ಪತಿ ಜೈಜಗದೀಶ್‍ರನ್ನು ಬಿಟ್ಟು ದೂರವಾಗುತ್ತಾರೆ. ವಿಷ್ಣುವರ್ಧನ್ ಜೀವತ್ಯಾಗ ಮಾಡುತ್ತಾರೆ. ಇಂದಿಗೂ ಭಾವುಕರನ್ನಾಗಿಸುವ ಬಂಧನದ ಕ್ಲೈಮಾಕ್ಸ್‍ನಿಂದಲೇ ಬಂಧನ 2 ಶುರುವಾಗಲಿದೆಯಂತೆ. ನಂದಿಯ ಮಡಿಲಲ್ಲಿ ಬೆಳೆದ ಆ ಮಗುವೇ ಬಂಧನ 2 ಚಿತ್ರದ ಹೀರೋ. ಯಾರಿರಬಹುದು..? ಯಾರಾಗಬಹುದು ಹೀರೋ..?

ಅನುಮಾನವೇನಿಲ್ಲ. ಸುಹಾಸಿನಿ ಜೈಜಗದೀಶ್ ದಂಪತಿಯ ಮಗನಾಗಿ ಕಾಣಿಸಿಕೊಳ್ಳೋದು ಬಾಬು ಪುತ್ರ ಅದಿತ್ಯ. ಸುಹಾಸಿನಿ ಜೈಜಗದೀಶ್ ಅದೇ ಪಾತ್ರದಲ್ಲಿ ಕಂಟಿನ್ಯೂ ಆಗ್ತಾರಂತೆ. ಉಳಿದ ವಿವರಗಳನ್ನು ಸದ್ಯದಲ್ಲೇ ಕೊಡಲಿದ್ದೇನೆ ಎಂದಿದ್ದಾರೆ ರಾಜೇಂದ್ರ ಸಿಂಗ್ ಬಾಬು.