Print 
yash, malavika mohan,

User Rating: 0 / 5

Star inactiveStar inactiveStar inactiveStar inactiveStar inactive
 
ಯಶ್ ಚಿತ್ರಕ್ಕೆ ನಾಯಕಿ ಸಿಕ್ಕರಂತೆ. ಯಾರು..? ಯಾರು..? ಯಾರು..?
Malavika Mohan, Yash

ಕೆಜಿಎಫ್ ಚಾಪ್ಟರ್ 2 ನಂತರ ಮುಂದೇನು ಅನ್ನೋದನ್ನ ಯಶ್ ಇದೂವರೆಗೆ ಅಧಿಕೃತವಾಗಿ ಹೇಳಿಲ್ಲ. ನರ್ತನ್ ಸಿನಿಮಾ ಕ್ಯೂನಲ್ಲಿದೆ ಅನ್ನೋ ಸುದ್ದಿ ಹಳೆಯದು. ಇದರ ನಡುವೆ ಯಶ್ ತೆಲುಗಿನ ಡೈರೆಕ್ಟರ್, ಹಿಂದಿ ಪ್ರೊಡ್ಯೂಸರ್, ತಮಿಳು ಫಿಲ್ಮ್ ಕಂಪೆನಿ ಜೊತೆ ಸಿನಿಮಾ ಮಾಡ್ತಾರಂತೆ ಅನ್ನೋ ಸುದ್ದಿಗಳು ಬಂದವು. ಹೋದವು. ತಣ್ಣಗಾದವು. ಈಗ ನರ್ತನ್ ನಿರ್ದೇಶನದ ಚಿತ್ರದ ಸ್ಕ್ರಿಪ್ಟ್ ವರ್ಕ್ ಮುಗಿದಿದ್ದು, ಅನೌನ್ಸ್ ಮಾಡುವ ಮುಹೂರ್ತ ಹತ್ತಿರವಾಗಿದೆ ಅನ್ನೋ ಸುದ್ದಿ ಸ್ವಲ್ಪ ಹೊಸದು.

ಗಾಂಧಿನಗರದಲ್ಲಿ ಸರಿದಾಡ್ತಿರೋ ಸುದ್ದಿ ಪ್ರಕಾರ ಯಶ್ ಮುಂದಿನ ಚಿತ್ರಕ್ಕೆ ಮಾಳವಿಕಾ ಮೋಹನ್ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ರಜನಿಕಾಂತ್ ಜೊತೆಗೆ ಪೆಟ್ಟಾ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಮಾಳವಿಕಾ ಮೋಹನ್, ಇತ್ತೀಚೆಗೆ ಮಾಸ್ಟರ್ ಚಿತ್ರದಲ್ಲಿ ನಟಿಸಿದ್ದರು. ಅವರು ಓಕೆ ಎಂದಿದ್ದಾರಂತೆ. ಕನ್‍ಫರ್ಮ್ ಸುದ್ದಿನಾ? ಅಲ್ಲ. ಅಫಿಷಿಯಲ್ ಆಗಿ ಯಶ್ ಮತ್ತು ನರ್ತನ್ ಇಬ್ಬರೂ ಜೊತೆಯಲ್ಲಿ ನಿಂತು ಅನೌನ್ಸ್ ಮಾಡುವವರೆಗೆ ಇಂತಹ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ.