Print 
martin,

User Rating: 0 / 5

Star inactiveStar inactiveStar inactiveStar inactiveStar inactive
 
ಅದೃಷ್ಟವಿದ್ದರೆ ಧ್ರುವಾಗೆ ನಾಯಕಿಯಾಗಬಹುದು. ಟ್ರೈ ಮಾಡ್ತೀರಾ?
Martin First Look Image

ಧ್ರುವ ಸರ್ಜಾ ಹೊಸ ಚಿತ್ರಕ್ಕೆ ಕಲಾವಿದೆ ಬೇಕಾಗಿದ್ದಾರೆ. ನಾಯಕಿ ಪಾತ್ರಕ್ಕೆ ಅನ್ನೋ ಕಾಸ್ಟಿಂಗ್ ಕಾಲ್ ಮಾಡಿದೆ ಮಾರ್ಟಿನ್ ಟೀಂ. ಮಾರ್ಟಿನ್, ಅದ್ಧೂರಿ ನಂತರ ಎ.ಪಿ.ಅರ್ಜುನ್ ಮತ್ತು ಧ್ರುವ ಸರ್ಜಾರನ್ನು ಒಟ್ಟಿಗೇ ಸೇರಿಸಿರೋ ಸಿನಿಮಾ. ಚಿತ್ರಕ್ಕೆ ನಾಯಕಿ ಯಾರಾಬಹುದು ಅನ್ನೋ ಕುತೂಹಲ ಇಟ್ಟುಕೊಂಡವರಿಗೆ ಸರ್‍ಪ್ರೈಸ್ ಕೊಟ್ಟಿದ್ದಾರೆ ಅರ್ಜುನ್. ಹೊಸ ಪ್ರತಿಭೆಗಳನ್ನು ಹುಡುಕೋದ್ರಲ್ಲಿ ಅರ್ಜುನ್ ಎಕ್ಸ್‍ಪರ್ಟ್ ಅನ್ನೋದು ಧ್ರುವ ಸರ್ಜಾ ಆಯ್ಕೆಯಲ್ಲೇ ಸಾಬೀತಾಗಿದೆ.

ಈಗ ನೀವು ಮಾಡಬೇಕಾದ್ದು ಇಷ್ಟೆ, ನಿಮ್ಮ ಪ್ರೊಫೈಲ್ ಫೋಟೋಗಳೊಂದಿಗೆ ಅರ್ಜುನ್ ಅವರನ್ನು ಕಾಂಟ್ಯಾಕ್ಟ್ ಮಾಡೋದು. ಪ್ರತಿಭೆ ಇರಬೇಕು. ಅದೃಷ್ಟವೂ ಇರಬೇಕು. ಎಲ್ಲ ಓಕೆ ಆದರೆ ಉದಯ್ ಕೆ.ಮೆಹ್ತಾ ನಿರ್ಮಾಣದ ಚಿತ್ರದಕ್ಕೆ ಧ್ರುವ ಸರ್ಜಾ ಎದುರು ಹೀರೋಯಿನ್ ಆಗುವ ಅದೃಷ್ಟ.