Print 

User Rating: 0 / 5

Star inactiveStar inactiveStar inactiveStar inactiveStar inactive
 
100% ಥಿಯೇಟರ್ ಓಪನ್ : ಶೀಘ್ರದಲ್ಲೇ ಆದೇಶ ಸಾಧ್ಯತೆ
100% ಥಿಯೇಟರ್ ಓಪನ್ : ಶೀಘ್ರದಲ್ಲೇ ಆದೇಶ ಸಾಧ್ಯತೆ

ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಇಳಿಯುತ್ತಲೇ ಇದೆ. ಹೀಗಾಗಿ ನಿರ್ಬಂಧದಲ್ಲಿರುವ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನೂ ಮತ್ತೆ ಓಪನ್ ಮಾಡಲು ಸರ್ಕಾರ ಮುಂದಾಗಿದೆ. ಈ ಕುರಿತು ಇಂದು ಅಥವಾ ನಾಳೆ ಆದೇಶ ಹೊರಬೀಳುವ ಸಾಧ್ಯತೆಗಳಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಣಯ ತೆಗೆದುಕೊಂಡರೆ, ಅದು ರಾಜ್ಯಾದ್ಯಂತ ಜಾರಿಯಾಗಲಿದೆ ಅನ್ನೋ ಸಂದೇಶವಂತೂ ಸಿಗಲಿದೆ. ಸದ್ಯಕ್ಕೆ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕಫ್ರ್ಯೂ ತೆಗೆಯಲಾಗಿದೆ. ನೈಟ್ ಕಫ್ರ್ಯೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿನಿಮಾ ಟಾಕೀಸ್‍ಗಳಿಗೆ ಮಾತ್ರವೇ ಅನ್ವಯವಾಗುವಂತೆ ಜಾರಿಯಲ್ಲಿದೆ. ಆದರೆ ಎಲ್ಲೆಡೆ ಕೊರೊನಾ ಇಳಿಕೆಯಾಗುತ್ತಿದೆ. ಸಾವಿನ ಪ್ರಮಾಣ, ಹೊಸ ಸೋಂಕಿನ ಪ್ರಮಾಣ.. ಎಲ್ಲವೂ ಇಳಿದಿದೆ. ಹೀಗಾಗಿ ತಜ್ಞರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಸಿನಿಮಾ ಮಂದಿರ ಮತ್ತು

ಪಬ್‍ಗಳನ್ನು ಮುಕ್ತವಾಗಿಸಿ ತೀರ್ಮಾನ ತೆಗೆದುಕೊಳ್ಳೋ ಸಾಧ್ಯತೆ ಇದೆ. . ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ 0.57 ಇದ್ದು, ಚಿತ್ರಮಂದಿರಗಳಿಗೆ ಶೇ.100ರಷ್ಟು ಅವಕಾಶ ನೀಡಲು ಸಮಸ್ಯೆ ಇಲ್ಲ ಎಂದು ಬಿಬಿಎಂಪಿ ಸರ್ಕಾರಕ್ಕೆ ತಿಳಿಸಿದೆ