Print 
upendra, rgv

User Rating: 0 / 5

Star inactiveStar inactiveStar inactiveStar inactiveStar inactive
 
ಶಿವಣ್ಣ ನಂತರ ಉಪ್ಪಿಗೆ ಆರ್`ಜಿವಿ ಆ್ಯಕ್ಷನ್ ಕಟ್
RGV, Upendra

ರಾಮ್ ಗೋಪಾಲ್ ವರ್ಮಾ. ಭಾರತೀಯ ಚಿತ್ರರಂಗದಲ್ಲಿ ವರ್ಮಾಗೆ ಅವರದ್ದೇ ಆದ ಪ್ರತ್ಯೇಕ ಸ್ಥಾನಮಾನವಿದೆ. ಸ್ವಲ್ಪ ತಿಕ್ಕಲು ಎನಿಸುವ, ಅಷ್ಟೇ ಟ್ಯಾಲೆಂಟೆಡ್ ಎನಿಸುವ ವರ್ಮಾ.. ಬಾಲಿವುಡ್ ಚಿತ್ರಗಳ ಕಥೆ ಹೇಳುವ ಶೈಲಿಯನ್ನೇ ಬದಲಿಸಿದ ನಿರ್ದೇಶಕ. ಇತ್ತ ಉಪೇಂದ್ರ ಕೂಡಾ ಅಷ್ಟೆ.. ಸಿನಿಮಾ ಮಾಡಿದ್ದು ಕನ್ನಡದಲ್ಲಿ. ಮಿಂಚಿದ್ದು ದಕ್ಷಿಣ ಭಾರತದಲ್ಲೇ ಆದರೂ, ಇಂಡಿಯನ್ ಸಿನಿಮಾಗಳ ಶೈಲಿಯಲ್ಲಿ ಸೆನ್ಸೇಷನ್ ಸೃಷ್ಟಿಸಿದವರು. ಅವರಿಬ್ಬರೂ ಈಗ ಒಂದಾಗುತ್ತಿದ್ದಾರೆ.

ಕಬ್ಜ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದವರು ವರ್ಮಾ. ಈಗ ಉಪ್ಪಿ ಹುಟ್ಟುಹಬ್ಬದ ದಿನ ಉಪ್ಪಿ ಅವರಿಗಾಗಿಯೇ ಒಂದು ಆ್ಯಕ್ಷನ್ ಸಿನಿಮಾ ಮಾಡುತ್ತಿದ್ದೇನೆ ಎಂದು ಘೋಷಿಸಿದ್ದಾರೆ. ಈ ಹಿಂದೆ ವರ್ಮಾ, ಕಿಲ್ಲಿಂಗ್ ವೀರಪ್ಪನ್ ಚಿತ್ರವನ್ನು ನಿರ್ದೇಶಿಸಿದ್ದರು. ಶಿವಣ್ಣ ನಟಿಸಿದ್ದ ಸಿನಿಮಾ ಹಿಟ್ ಕೂಡಾ ಆಗಿತ್ತು. ಈಗ ಉಪೇಂದ್ರ ಅವರಿಗಾಗಿ ಸಿನಿಮಾ ಮಾಡುತ್ತಿದ್ದಾರೆ. ದಾವಣಗೆರೆಯ ರಾಜ್ ಯಜಮಾನ್ ಈ ಚಿತ್ರದ ಪ್ರೊಡ್ಯೂಸರ್. ಎ ಸ್ಕ್ವೇರ್ ಎಂಬ ಪ್ರೊಡಕ್ಷನ್ ಹೌಸ್ ಈ ಸಿನಿಮಾ ನಿರ್ಮಿಸುತ್ತಿದೆ. ಸದ್ಯಕ್ಕೆ ಹೊರಬಿದ್ದಿರೋ ಡೀಟೈಲ್ಸ್ ಇಷ್ಟು ಮಾತ್ರ. ಮುಂದಿನ ವಿವರಗಳನ್ನು ಚಿತ್ರತಂಡ ಸದ್ಯದಲ್ಲೇ ಡೀಟೈಲ್ ಆಗಿ ಹಂಚಿಕೊಳ್ಳಲಿದೆ.