Print 
actress shruthi

User Rating: 0 / 5

Star inactiveStar inactiveStar inactiveStar inactiveStar inactive
 
ಆ ಕೈಲಿ ಭಂಗಿ.. ಈ ಕೈಲಿ ಗನ್ನು.. ಶೃತಿ @46 ಸ್ಪೆಷಲ್ಲು..!
ಆ ಕೈಲಿ ಭಂಗಿ.. ಈ ಕೈಲಿ ಗನ್ನು.. ಶೃತಿ @46 ಸ್ಪೆಷಲ್ಲು..!

ಶೃತಿ ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಕೈಲಿ ಭಂಗಿ ಹಿಡಕೊಂಡು, ಹೊಗೆ ಬಿಡುವ ಪಾತ್ರದಲ್ಲಿ ನಟಿಸಿದ್ದಾರೆ. ಜಡೆಮಾಲಿನಿಯಂತೆ ಕಾಣುವ ಶೃತಿಯ ಲುಕ್ ಬೆರಗು ಹುಟ್ಟಿಸುವಂತಿದೆ. ಈ ಬೆರಗು ಹುಟ್ಟಿಸುವ ಪಾತ್ರ ಮಾಡಿರೋದು ಭಜರಂಗಿ 2ನಲ್ಲಿ.

ಎ. ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರ ರಿಲೀಸ್ ಆಗೋಕೆ ರೆಡಿಯಾಗಿ ಕುಳಿತಿದೆ. 100% ಥಿಯೇಟರ್ ಓಪನಿಂಗ್‍ಗಾಗಿ ಕಾಯುತ್ತಿರುವ ಭಜರಂಗಿ 2 ಟೀಂ, ಶೃತಿ ಹುಟ್ಟುಹಬ್ಬಕ್ಕಾಗಿ ಸ್ಪೆಷಲ್ ಪೋಸ್ಟರ್ ಕೊಟ್ಟು ವ್ಹಾವ್ ಎನ್ನುವಂತೆ ಮಾಡಿದೆ.

ಅಂತಹುದೇ ಥ್ರಿಲ್ ಕೊಟ್ಟಿರೋದು ರತ್ನನ್ ಪ್ರಪಂಚ ಟೀಂ. ಡಾಲಿ ಧನಂಜಯ್ ನಟಿಸಿರುವ ರತ್ನನ್ ಪ್ರಪಂಚದಲ್ಲಿ ಶೃತಿ ಕೈಗೆ ಗನ್ನು ಕೊಟ್ಟಿದ್ದಾರೆ ನಿರ್ದೇಶಕರು. ಶೃತಿ ಗನ್ ಹಿಡಿದಿರುವುದು ಹೊಸದೇನಲ್ಲ. ಈ ಹಿಂದೆ ಕೆಲವು ಕಡೆ ಪ್ರಯತ್ನಗಳಾಗಿದ್ದರೂ, ರಿಜಿಸ್ಟರ್ ಆಗಿಲ್ಲ. ರತ್ನನ್ ಪ್ರಪಂಚ ಈಗಾಗಲೇ ಟೀಸರ್ ಮೂಲಕವೇ ಸಂಚಲನ ಸೃಷ್ಟಿಸಿರೋ ಸಿನಿಮಾ. ವೇಯ್ಟ್... ವೇಯ್ಟ್.. ವೇಯ್ಟ್.. ಒಟ್ಟಿನಲ್ಲಿ ಶೃತಿಯವರದ್ದು 46ನೇ ಹುಟ್ಟುಹಬ್ಬದ ದಶಾವತಾರ ಎನ್ನಲಡ್ಡಿಯಿಲ್ಲ.