` ಲಕ್ಕಿಮ್ಯಾನ್ ಡ್ಯಾನ್ಸ್ : ಅಪ್ಪು ಪ್ರಭುದೇವ ಫೀಲಿಂಗ್ಸ್ ಏನು? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಲಕ್ಕಿಮ್ಯಾನ್ ಡ್ಯಾನ್ಸ್ : ಅಪ್ಪು ಪ್ರಭುದೇವ ಫೀಲಿಂಗ್ಸ್ ಏನು?
Prabhudeva, Puneeth Rajkumer

ಪ್ರಭುದೇವ ಅವರನ್ನು ಬಹಳಷ್ಟು ಸಾರಿ ಭೇಟಿ ಮಾಡಿದ್ದೇನೆ. ನಾನು ಅವರ ಫ್ಯಾನ್. ಅವರ ಜೊತೆ ಲಕ್ಕಿಮ್ಯಾನ್ ಚಿತ್ರದಲ್ಲಿ ಡ್ಯಾನ್ಸ್ ಮಾಡಿದ್ದು ಮರೆಯಲಾಗದ ಅನುಭವ. ನೆಚ್ಚಿನ ಡ್ಯಾನ್ಸರ್ ಜೊತೆ ಡ್ಯಾನ್ಸ್ ಮಾಡುವ ಅವಕಾಶ ಸಿಕ್ಕಾಗ ಒಬ್ಬ ಅಭಿಮಾನಿಯ ಖುಷಿ ಹೇಗಿರುತ್ತೋ.. ನನಗೂ ಹಾಗೆಯೇ ಆಗಿದೆ. ಇದು ಪ್ರಭುದೇವ ಜೊತೆ ಲಕ್ಕಿಮ್ಯಾನ್ ಚಿತ್ರದಲ್ಲಿ ಹೆಜ್ಜೆ ಹಾಕಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮಾತಾದರೆ, ಅತ್ತ ಪ್ರಭುದೇವ ಕೂಡಾ ಇದಕ್ಕೆ ಹೊರತಾಗಿಲ್ಲ.

ನಿಮ್ಮೊಂದಿಗೆ ಡ್ಯಾನ್ಸ್ ಮಾಡಿದ್ದು ಬಹಳ ಖುಷಿಕೊಟ್ಟ ವಿಚಾರ. ನೀವೊಬ್ಬ ಸಿಹಿಯಾದ ಮನಸ್ಸುಳ್ಳ ಅದ್ಭುತ ವ್ಯಕ್ತಿ ಎಂದು ಹೇಳಿದ್ದಾರೆ ಪ್ರಭುದೇವ.

ಲಕ್ಕಿಮ್ಯಾನ್, ತಮಿಳಿನ ಓ ಮೈ ಕಡವುಳೆ ಚಿತ್ರದ ರೀಮೇಕ್. ಕನ್ನಡದಲ್ಲಿ ಈ ಚಿತ್ರವನ್ನು ಚಿತ್ರ, ಮನಸೆಲ್ಲ ನೀನೆ ಚಿತ್ರಗಳಲ್ಲಿ ನಟಿಸಿದ್ದ ಹೀರೋ ನಾಗೇಂದ್ರ ಪ್ರಸಾದ್ ಡೈರೆಕ್ಟ್ ಮಾಡುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಪ್ರಧಾನ ಪಾತ್ರಗಳಲ್ಲಿದ್ದಾರೆ.