` ವಿ. ರವಿಚಂದ್ರನ್ ಹೆಸರು ಬದಲಾಗಿದೆ. ಏನದು ಹೊಸ ಹೆಸರು? ಯಾಕೆ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವಿ. ರವಿಚಂದ್ರನ್ ಹೆಸರು ಬದಲಾಗಿದೆ. ಏನದು ಹೊಸ ಹೆಸರು? ಯಾಕೆ?
V Ravichandran

ಕ್ರೇಜಿಸ್ಟಾರ್ ರವಿಚಂದ್ರನ್. ಕಥೆ, ಚಿತ್ರಕಥೆ, ನಿರ್ದೇಶನ : ವಿ.ರವಿಚಂದ್ರನ್. ಟೈಟಲ್ ಕಾರ್ಡಿನಲ್ಲಿ ಇನ್ನು ಮುಂದೆ ಈ ರೀತಿ ಹೆಸರು ಬರೋದಿಲ್ಲ. ಏಕೆಂದರೆ ರವಿಚಂದ್ರನ್ ಹೆಸರು ಬದಲಿಸಿದ್ದಾರೆ. ಹೊಸ ನಾಮಕರಣ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಅವರ ಹೆಸರು ರವಿಚಂದ್ರ ವಿ. ಎಂದು ಇರಲಿದೆ. ಹೆಸರಿನ ಮೊದಲಿನಲ್ಲಿದ್ದ ವಿ. ಹೆಸರಿನ ಕೊನೆಗೆ ಸೇರಿದರೆ, ನ್ ಅಕ್ಷರ ಇರುವುದಿಲ್ಲ. ಇದನ್ನು ಸ್ವತಃ ಬಹಿರಂಗಪಡಿಸಿರೋದು ರವಿಚಂದ್ರನ್. ಅದಕ್ಕೆಲ್ಲ ಕಾರಣ ಒಬ್ಬ ಜ್ಯೋತಿಷಿ ಎಂದರೆ ನಂಬಲೇಬೇಕು.

ಏಕೆಂದರೆ ರವಿಚಂದ್ರನ್ ಜ್ಯೋತಿಷ್ಯ ನಂಬುವವರಲ್ಲ. ದೇವರನ್ನಷ್ಟೇ ನಂಬುವ ವ್ಯಕ್ತಿ. ಅಂತಾದ್ದರಲ್ಲಿ ಇತ್ತೀಚೆಗೆ ಜ್ಯೋತಿಷಿಯೊಬ್ಬರು ನೀವು ನಿಮ್ಮ ಹೆಸರು ಬದಲಿಸಿಕೊಳ್ಳಿ. ರವಿಚಂದ್ರ ವಿ. ಎಂದು ಇಟ್ಟುಕೊಳ್ಳಿ. ಒಳ್ಳೆಯದಾಗುತ್ತದೆ ಎಂದಿದ್ದಾರೆ. ಅವರು ಅದನ್ನು ನನ್ನನ್ನು ಹೆದರಿಸಲೋ, ಆಸೆ ಹುಟ್ಟಿಸಲೋ ಹೇಳಿದ್ದಲ್ಲ. ನನ್ನ ಮೇಲಿನ ಪ್ರೀತಿ, ಗೌರವದಿಂದ, ನನಗೆ ಒಳ್ಳೆಯದಾಗಲಿ ಎಂದ ಆಸೆಯಿಂದ ಹೇಳಿದರು. ಅದಕ್ಕಾಗಿ ಹಣವನ್ನೂ ಕೇಳಲಿಲ್ಲ. ಅವರ ಪ್ರೀತಿಗೆ ನಾನು ಶರಣಾದೆ ಎನ್ನುವ ರವಿಚಂದ್ರನ್, ಅವರ ಹೆಸರನ್ನೂ ಹೇಳಿಲ್ಲ

ಇಷ್ಟಕ್ಕೂ ನನ್ನ ಹೆಸರು ಬದಲಾಗುವುದು, ರವಿಚಂದ್ರ ವಿ. ಎಂದು ಬದಲಾಗುವುದು ಟೈಟಲ್ ಕಾರ್ಡಿನಲ್ಲಿ ಮಾತ್ರ. ಕನ್ನಡಿಗರು ನನ್ನನ್ನು ಗುರುತಿಸುವುದು ರವಿಚಂದ್ರನ್ ಎಂತಲೇ. ಹಾಗಿರೋವಾಗ ಯಾವ ಹೆಸರಿಟ್ಟುಕೊಂಡರೇನು ಅನ್ನೋ ಮಾತು ಕೂಡಾ ರವಿಚಂದ್ರನ್ ಕಡೆಯಿದ ಬಂದಿದೆ.