ಒಡಿಶಾದ ಕಡಲ ತೀರದಲ್ಲಿ ಈ ಬಾರಿ ವಿಷ್ಣುವರ್ಧನ್ ಕೀರ್ತಿ ಪತಾಕೆಯೂ ಹಾರುತ್ತಿದೆ. ಒಡಿಶಾದ ಪುರಿ ಮರೀನ್ ಡ್ರೈವ್ ಬೀಚ್ನಲ್ಲಿ ಮರಳುಶಿಲ್ಪಿ ಮನೀಶ್ ಕುಮಾರ್ ವಿಷ್ಣುವರ್ಧನ್ ಅವರನ್ನು ಮರಳು ಶಿಲ್ಪದಲ್ಲಿ ರೂಪಿಸಿದ್ದಾರೆ. 6 ಅಡಿ ಎತ್ತರ, 15 ಅಡಿ ಅಗಲದ ವಿಷ್ಣು ಮರಳುಶಿಲ್ಪ ನೋಡುಗರ ಗಮನ ಸೆಳೆಯುತ್ತದೆ.
ಸೆ.18ರಂದು ವಿಷ್ಣುವರ್ಧನ್ ಅವರ 71ನೇ ಹುಟ್ಟುಹಬ್ಬದ ವಿಶೇಷವಾಗಿ ಈ ಮರಳುಶಿಲ್ಪ ರೂಪಿಸಲಾಗಿದೆ. ವಿಷ್ಣುವರ್ಧನ್ ಅವರ ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಈ ಮರಳುಶಿಲ್ಪದ ರೂವಾರಿ. ಮರಳು ಶಿಲ್ಪಿಯ ಜೊತೆ ತಾವೂ ಕೈಜೋಡಿಸಿದ್ದಾರೆ ಶ್ರೀನಿವಾಸ್.
ಕನ್ನಡಿಗರಿಗೆ ವಿಷ್ಣುವರ್ಧನ್ ಅವರ ಸಾಧನೆ, ವ್ಯಕ್ತಿತ್ವದ ಬಗ್ಗೆ ಹೇಳುವ ಅಗತ್ಯವಿಲ್ಲ. ಅವರ ಸಾಧನೆಯನ್ನು ಕರ್ನಾಟಕದ ಹೊರಗೆ ತೆಗೆದುಕೊಂಡು ಹೋಗಬೇಕು ಎನ್ನುವುದು ನನ್ನ ಮಹದಾಸೆ ಎಂದಿದ್ದಾರೆ ಶ್ರೀನಿವಾಸ್.