` ಅಪ್ಪು ಪ್ರಭುದೇವ ಒಟ್ಟಿಗೇ ಡ್ಯಾನ್ಸ್ ಮಾಡೋ ಸಿನಿಮಾ ಫಿಕ್ಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಪ್ಪು ಪ್ರಭುದೇವ ಒಟ್ಟಿಗೇ ಡ್ಯಾನ್ಸ್ ಮಾಡೋ ಸಿನಿಮಾ ಫಿಕ್ಸ್
Prabhudeva, Puneeth Rajkumer

ಇಂಡಿಯಾದ ಮೈಕೆಲ್ ಜಾಕ್ಸನ್ ಎಂದೇ ಒಂದು ಕಾಲಕ್ಕೆ ಕರೆಸಿಕೊಳ್ಳುತ್ತಿದ್ದ ಪ್ರಭುದೇವ ಈಗ ಆ ಹಂತವನ್ನೂ ದಾಟಿದ್ದಾರೆ. ಪ್ರಭುದೇವ ಅವರಿಗೆ ಬೇರೆಯದ್ದೇ ಆದ ಸ್ಪೆಷಾಲಿಟಿಯೂ ಇದೆ. ಇನ್ನು ಕನ್ನಡಿಗರ ಪಾಲಿಗೆ ಡ್ಯಾನ್ಸ್ ಎಂದರೆ ಅದು ಪುನೀತ್ ರಾಜ್‍ಕುಮಾರ್. ಈ ಇಬ್ಬರನ್ನೂ ಒಟ್ಟಿಗೇ ಕುಣಿಸಿದರೆ ಹೇಗೆ ಅನ್ನೋ ಐಡಿಯಾ ಹಲವರಿಗೆ ಇತ್ತು. ಆ ಕನಸಿಗೆ ಈಗ ರೆಕ್ಕೆ ಪುಕ್ಕ ಬಂದಿದೆ.

ಪುನೀತ್ ಮತ್ತು ಅಪ್ಪು ಲಕ್ಕಿಮ್ಯಾನ್ ಅನ್ನೋ ಚಿತ್ರದಲ್ಲಿ ಒಟ್ಟಿಗೇ ಡ್ಯಾನ್ಸ್ ಮಾಡುತ್ತಿದ್ದಾರೆ. ಪ್ರಭುದೇವ ಅವರ ತಮ್ಮ ನಾಗೇಂದ್ರ ಪ್ರಸಾದ್ ಲಕ್ಕಿ ಮ್ಯಾನ್ ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ಅದು ತಮಿಳಿನ ಓ ಮೈ ಕಡವುಳೆ ಚಿತ್ರದಿಂದ ಸ್ಫೂರ್ತಿ ಪಡೆದಿರೋ ಸಿನಿಮಾ. ಆ ಚಿತ್ರದಲ್ಲಿ ಅಪ್ಪು ಅತಿಥಿ ನಟ.

ಆ ಚಿತ್ರದಲ್ಲಿ ಪುನೀತ್ ಮತ್ತು ಪ್ರಭುದೇವ ಒಟ್ಟಿಗೇ ನೃತ್ಯ ಮಾಡಲಿದ್ದಾರಂತೆ. ಜಾನಿ ಮಾಸ್ಟರ್ ಆ ಹಾಡಿಗೆ ಕೊರಿಯೋಗ್ರಫಿ ಮಾಡಲಿದ್ದಾರಂತೆ. ಅಂದಹಾಗೆ ಲಕ್ಕಿಮ್ಯಾನ್ ಚಿತ್ರದ ಹೀರೋ ಯಾರು ಗೊತ್ತಾ? ಪುನೀತ್ ಅವರ ಹಾರ್ಡ್‍ಕೋರ್ ಫ್ಯಾನ್ ಡಾರ್ಲಿಂಗ್ ಕೃಷ್ಣ.