ವರ್ಷದ ಕೊನೆಗೆ ಕನ್ನಡ ಚಿತ್ರರಂಗ ದೊಡ್ಡ ದೊಡ್ಡ ಸಿನಿಮಾಗಳ ಮೂಲಕ ಸೆನ್ಸೇಷನ್ ಸೃಷ್ಟಿಸುತ್ತಾ..? ಹೌದು ಅಂತಿದೆ ಗಾಂಧಿ ನಗರ. ಡಿಸೆಂಬರ್ನಲ್ಲಿ ಶ್ರೀಮುರಳಿ ಮತ್ತು ರಕ್ಷಿತ್ ಶೆಟ್ಟಿಯ ಸಿನಿಮಾಗಳು ರಿಲೀಸ್ ಅಗಲಿವೆಯಂತೆ.
ಶ್ರೀಮುರಳಿಯವರ ಮದಗಜ ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ. ಮುರಳಿ ಎದುರು ಆಶಿಕಾ ರಂಗನಾಥ್ ನಾಯಕಿಯಾಗಿದ್ದು, ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ಈ ಚಿತ್ರದ ನಿರ್ದೇಶಕ.
ಇನ್ನು ರಕ್ಷಿತ್ ಶೆಟ್ಟಿ ಪಾಲಿಗೆ ಡಿಸೆಂಬರ್ ಕೊನೆಯ ವಾರ, ಅದೃಷ್ಟದ ವಾರ ಎಂದರೆ ತಪ್ಪೇನಲ್ಲ. ಕಿರಿಕ್ ಪಾರ್ಟಿ ರಿಲೀಸ್ ಆಗಿದ್ದು ಅದೇ ವಾರ. ಅವನೇ ಶ್ರೀಮನ್ನಾರಾಯಣಕ್ಕೂ ಡಿಸೆಂಬರ್ ಲಿಂಕ್ ಇದೆ. ಈಗ ಚಾರ್ಲಿ 777 ಕೂಡಾ ಅದೇ ವಾರ ರಿಲೀಸ್ ಆಗಲಿದೆಯಂತೆ. ಸ್ವತಃ ರಕ್ಷಿತ್ ಶೆಟ್ಟಿಯೂ ನಿರ್ಮಾಪಕರಾಗಿರುವ ಚಾರ್ಲಿ 777 ಚಿತ್ರದ ಚಿತ್ರೀಕರಣ ಮುಗಿದಿದೆ. ಟ್ರೇಲರ್, ಹಾಡು ಗಮನ ಸೆಳೆಯುತ್ತಿದೆ. ಇದು ಸದ್ಯಕ್ಕೆ ಗಾಂಧಿನಗರದಲ್ಲಿ ತೇಲುತ್ತಿರುವ ಸುದ್ದಿ. ಅಧಿಕೃತ ರಿಲೀಸ್ ಡೇಟ್ ಇನ್ನೂ ಫಿಕ್ಸ್ ಆಗಬೇಕಿದೆ.