ಡಾಲಿ ಧನಂಜಯ್ ಈಗಾಗಲೇ ಕನ್ನಡದಲ್ಲಿ ತಮ್ಮದೇ ಆದ ಒಂದು ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದೊಡ್ಡದೊಂದು ಹಿಟ್ ಅವರಿಗಾಗಿ ಕಾಯುತ್ತಿದೆ. ಇದರ ನಡುವೆ ಪ್ರಯೋಗಾತ್ಮಕ ಚಿತ್ರಗಳ ಸೆಂಟರ್ ಆಗಿರುವ ಮಲಯಾಳಂ ಚಿತ್ರರಂಗಕ್ಕೆ ಧನಂಜಯ್ ಎಂಟ್ರಿ ಕೊಟ್ಟಿದ್ದಾರೆ.
21 ಅವರ್ಸ್ ಅನ್ನೋ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ ಧನಂಜಯ್. ಮಲ್ಲು ಚಿತ್ರಗಳು ತೆಲುಗು, ಕನ್ನಡದ ಮಾದರಿಯ ಚಿತ್ರಗಳಿಗಿಂತ ಭಿನ್ನವಾಗಿರುತ್ತವೆ. ರಂಗಭೂಮಿಯಿಂದ ಪಳಗಿ ಬಂದಿರುವ ಧನಂಜಯ್ ಅಲ್ಲಿಯೂ ದೊಡ್ಡ ಗುರುತು ಮೂಡಿಸುವ ಎಲ್ಲ ಸಾಧ್ಯತೆಗಳೂ ಇವೆ.
ಧನಂಜಯ್ ಅವರಿಗೆ ಆಗಸ್ಟ್ 23ರಂದು ಹುಟ್ಟುಹಬ್ಬ. ಈ ಹುಟ್ಟುಹಬ್ಬಕ್ಕೆಂದೇ 21 ಅವರ್ಸ್ ಟೀಂ, ಚಿತ್ರದ ಪೋಸ್ಟರ್ ರಿಲೀಸ್ ಮಾಡಿದೆ. ಈ ಚಿತ್ರ ಕನ್ನಡದಲ್ಲೂ ಡಬ್ ಆಗಿ ಬರಲಿದೆ. ಜೈಶಂಕರ್ ಪಂಡಿತ್ ಎನ್ನುವವರು ಈ ಚಿತ್ರದ ಡೈರೆಕ್ಟರ್. ಸುದೇವ್ ನಾಯರ್, ರಾಹುಲ್ ಮಹದೇವ್, ದುರ್ಗಾ ಕೃಷ್ಣ.. ಮೊದಲಾದವರು ಧನಂಜಯ್ ಜೊತೆ ನಟಿಸುತ್ತಿದ್ದಾರೆ.