ಕೋಟಿಗೊಬ್ಬ 3 ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ. ಸುದೀಪ್ ಅವರ ಹಿಂದಿನ ಚಿತ್ರಗಳಂತೆ ಕೋಟಿಗೊಬ್ಬ 3 ಕೂಡಾ ಬಹುಭಾಷೆಗಳಿಗೆ ಹೋಗುತ್ತಿದೆ. ಇದರ ಮೊದಲ ಹೆಜ್ಜೆಯಾಗಿ ಚಿತ್ರದ 3 ಹಾಡುಗಳನ್ನು ತೆಲುಗಿನಲ್ಲೂ ರಿಲೀಸ್ ಮಾಡಲಾಗಿದೆ.
ಕನ್ನಡದಲ್ಲಿ ಹಲ್‍ಚಲ್ ಎಬ್ಬಿಸಿರುವ ಪಟಾಕಿ ಪೋರಿಯೋ ಹಾಡು ತೆಲುಗಿನಲ್ಲೂ ಹಬ್ಬ ಮಾಡಲು ಸಿದ್ಧವಾಗುತ್ತಿದೆ. ಕಿಚ್ಚ ಮತ್ತು ಆಶಿಕಾ ರಂಗನಾಥ್ ಕಿಚ್ಚು ಹಚ್ಚುತ್ತಿದ್ದಾರೆ. ಶಿವ ಕಾರ್ತಿಕ್ ನಿರ್ದೇಶನದ ಚಿತ್ರದಲ್ಲಿ ಸುದೀಪ್ ಎದುರು ಮಡೋನ್ನಾ ಸೆಬಾಸ್ಟಿಯನ್ ನಾಯಕಿ. ಸೂರಪ್ಪ ಬಾಬು ನಿರ್ಮಾಣದ ಚಿತ್ರ, ಶೂಟಿಂಗ್ ಮತ್ತು ಡಬ್ಬಿಂಗ್ ಎಲ್ಲವನ್ನೂ ಮುಗಿಸಿದ್ದು ರಿಲೀಸ್ ಆಗೋಕೆ ರೆಡಿಯಾಗಿದೆ. ವೇಯ್ಟಿಂಗ್ ಫಾರ್ ಕೊರೊನಾ ಗೋಯಿಂಗ್.