` ಸಲಗ ರಿಲೀಸ್ : ಕೊರೊನಾ ಅಡ್ಡಗಾಲು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸಲಗ ರಿಲೀಸ್ : ಕೊರೊನಾ ಅಡ್ಡಗಾಲು
Salaga Movie Image

ಎಲ್ಲವೂ ಪ್ಲಾನ್ ಪ್ರಕಾರವೇ ನಡೆದಿದ್ದರೆ ಈ ವರಮಹಾಲಕ್ಷ್ಮಿ ಹಬ್ಬಕ್ಕೆ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಿಸಿ ನಟಿಸಿರುವ ಸಲಗ ರಿಲೀಸ್ ಆಗಬೇಕಿತ್ತು. ಆದರೀಗ ಮತ್ತೆ ಸಲಗನಿಗೆ ಕೊರೊನಾ ಅಡ್ಡಗಾಲು ಹಾಕಿದೆ. ಕಳೆದ ವೀಕೆಂಡ್‍ನಿಂದ ರಾಜ್ಯದ 8 ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್ ಡೌನ್ ಮತ್ತು ನೈಟ್  ಕಫ್ರ್ಯೂ ಜಾರಿಗೆ ಬಂದಿರೋದೇ ಇದಕ್ಕೆ ಕಾರಣ.

ಆಗಸ್ಟ್ 1ರಿಂದ ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಲ್ಲೇ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿದ್ಧತೆ ಮಾಡಿಕೊಂಡೆವು. ಆದರೀಗ ಪರಿಸ್ಥಿತಿ ಬದಲಾಗಿದೆ. ರಾಜ್ಯದ 8 ಜಿಲ್ಲೆಗಳಲ್ಲಿ , ವಾರದ ಅಂತ್ಯದಲ್ಲಿ ಶೇ.50 ಇರಲಿ, ಚಿತ್ರಮಂದಿರಗಳನ್ನೇ ತೆರೆಯುವ ಹಾಗಿಲ್ಲ. ಜೊತೆಗೆ ನೈಟ್ ಕಫ್ರ್ಯೂ. ಸೆಕೆಂಡ್ ಶೋಗೆ ಮತ್ತೆ ಪ್ರಾಬ್ಲಂ. ಈ ಪರಿಸ್ಥಿತಿಯಲ್ಲಿ ಬಿಡುಗಡೆ ಬಗ್ಗೆ ಯೋಚಿಸುವಂತಾಗಿದೆ. ಸರ್ಕಾರದ ಜೊತೆ ಮಾತನಾಡಿ ಬಿಡುಗಡೆ ಮಾಡಬೇಕೋ.. ಬೇಡವೋ.. ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್.