ಗಾನಗಾರುಡಿಗ ಹಂಸಲೇಖ ಕಿರುತೆರೆಗೆ ಬಂದಿದ್ದು ಝೀ ಕನ್ನಡದ ಝೀ ಕನ್ನಡದ ಮೂಲಕ. ಝೀ ಕನ್ನಡದ ಸರಿಗಮಪ ಶೋ ಮೂಲಕ ಬಂದ ಹಂಸಲೇಖ, ಆ ಕಾರ್ಯಕ್ರಮಕ್ಕೆ ಮೆರುಗು ತಂದಿದ್ದರು. ಮಹಾಗುರುಗಳ ಸ್ಥಾನದಲ್ಲಿದ್ದರು. ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ ಮತ್ತು ರಾಜೇಶ್ ಕೃಷ್ಣನ್ ತೀರ್ಪುಗಾರರಾಗಿದ್ದರೆ, ಇವರು ಮಹಾಗುರು. ರಿಯಾಲಿಟಿ ಶೋ ಕಳೆ ಹೆಚ್ಚಿಸಿದ್ದ ಹಂಸಲೇಖ ಈಗ ಅಲ್ಲಿಂದ ಹೊರಬಿದ್ದರಾ..? ಹೌದು ಎನ್ನಲಾಗುತ್ತಿದೆ.
ಕಲರ್ಸ್ ಕನ್ನಡದಲ್ಲಿ ಈಗ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋ ಮತ್ತೆ ಶುರುವಾಗುತ್ತಿದೆ. ಎದೆ ತುಂಬಿ ಹಾಡುವೆನು ಕಾರ್ಯಕ್ರಮ, ಎಸ್‍ಪಿಬಿ ಅವರ ಜೊತೆಯಲ್ಲೇ ಗುರುತಿಸಿಕೊಂಡಿದ್ದ ಕಾರ್ಯಕ್ರಮ. ಹೆಚ್ಚೂಕಡಿಮೆ ಒಂದು ದಶಕ ಟಾಪ್ ಶೋ ಆಗಿದ್ದ ಕಾರ್ಯಕ್ರಮವದು. ಆ ಕಾರ್ಯಕ್ರಮದಲ್ಲಿ ಎಸ್‍ಪಿಬಿ ಅವರ ಸ್ಥಾನಕ್ಕೆ ಹಂಸಲೇಖ ಬಂದಿದ್ದಾರೆ. ಅವರ ಜೊತೆಯಲ್ಲಿ ರಾಜೇಶ್ ಕೃಷ್ಣನ್ ಕೂಡಾ ಇರುತ್ತಾರೆ. ಇಬ್ಬರೂ ಕೂಡಾ ಝೀ ಕನ್ನಡದಿಂದ ಹೊರಬಿದ್ದಂತಾಗಿದೆ.