ಕೆಜಿಎಫ್ ಚಾಪ್ಟರ್ 2 ಚಿತ್ರದ ಒಂದೊಂದೇ ಕೆಲಸಗಳು ಮುಗಿಯುತ್ತಾ ಬರುತ್ತಿವೆ. ಇದರ ನಡುವೆಯೇ ಬಂದ ಸಂಜಯ್ ದತ್ ಹುಟ್ಟುಹಬ್ಬವನ್ನು ಕೆಜಿಎಫ್ ತಂಡ ವಿಶೇಷವಾಗಿಯೇ ಸೆಲಬ್ರೇಟ್ ಮಾಡಿದೆ. ಸಂಜಯ್ ದತ್ ಚಿತ್ರದಲ್ಲಿ ಅಧೀರನ ಪಾತ್ರ ನಿರ್ವಹಿಸುತ್ತಿದ್ದು, ಆ ಪಾತ್ರದ ಪೋಸ್ಟರ್ ಹೊರಬಿಟ್ಟಿದೆ ಕೆಜಿಎಫ್ ಟೀಂ.
ಪ್ರಶಾಂತ್ ನೀಲ್ ಅವರ ಕಸುಬುದಾರಿಕೆ ಪೋಸ್ಟರ್‍ನಲ್ಲಿ ಎದ್ದು ಕಾಣುತ್ತಿದೆ. ಯಶ್ ಹೀರೋ ಆಗಿದ್ದರೆ, ಸಂಜಯ್ ದತ್ ಚಿತ್ರದ ಪ್ರಮುಖ ವಿಲನ್ ಅಧೀರ. ಪೋಸ್ಟರ್ ಹೊರಬಿದ್ದಿದ್ದೇ ತಡ, ಅಭಿಮಾನಿಗಳು ಹಬ್ಬವನ್ನೇ ಮಾಡಿಕೊಂಡಿದ್ದಾರೆ. ಅಭಿಮಾನಿಗಳ ಸಂಭ್ರಮ, ಸಂಜುಬಾಬಾಗೂ ಖುಷಿ ಕೊಟ್ಟಿದೆ.
ಕೆಜಿಎಫ್ ಗಾಗಿ ಕೆಲಸ ಮಾಡಿದ್ದು ಒಂದು ಅದ್ಭುತ ಅನುಭವ. ನೀವೆಲ್ಲ ಈ ಚಿತ್ರಕ್ಕಾಗಿ ಎಷ್ಟು ಕಾತುರದಿಂದ ಕಾಯುತ್ತಿದ್ದೀರಿ ಎಂದು ಗೊತ್ತು. ಈ ಚಿತ್ರ ಖಂಡಿತಾ ನಿಮಗೆ ನಿರಾಸೆ ಮಾಡಲ್ಲ ಎಂದು ಭರವಸೆಯನ್ನೂ ಕೊಟ್ಟಿದ್ದಾರೆ ಸಂಜಯ್ ದತ್.