` ವಿನಯ್ ರಾಜ್`ಕುಮಾರ್ ಮುಂದಿನ ಸಿನಿಮಾ ಯಾವಾಗ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವಿನಯ್ ರಾಜ್`ಕುಮಾರ್ ಮುಂದಿನ ಸಿನಿಮಾ ಯಾವಾಗ?
Vinay Rajkumar

ವಿನಯ್ ರಾಜ್`ಕುಮಾರ್ ಅವರ ಸಿನಿಮಾ ರಿಲೀಸ್ ಯಾವಾಗ? ಈ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. 2015ರಲ್ಲಿ ಸಿದ್ಧಾರ್ಥ ಚಿತ್ರದ ಮೂಲಕ ಎಂಟ್ರಿ ಕೊಟ್ಟ ವಿನಯ್, ನಂತರದ ಈ 5 ವರ್ಷಗಳಲ್ಲಿ ನಟಿಸಿದ್ದು 2 ಚಿತ್ರಗಳಲ್ಲಿ ಮಾತ್ರ. ಕೈಲಿ ಚಿತ್ರಗಳಿವೆ.

ಗ್ರಾಮಾಯಣ, ಅಂದೊಂದಿತ್ತು ಕಾಲ, ಟೆನ್ ಮತ್ತು ಪೆಪೆ. ಇವುಗಳಲ್ಲಿ ಗ್ರಾಮಾಯಣ ಚಿತ್ರ ಅರ್ಧಕ್ಕೇ ನಿಂತಿದೆ. ನಿರ್ಮಾಪಕರ ಅಕಾಲಿಕ ಮರಣ ಚಿತ್ರವನ್ನು ಅರ್ಧದಲ್ಲೇ ನಿಲ್ಲುವಂತೆ ಮಾಡಿದೆ. ಆ ಚಿತ್ರ ನಿಲ್ಲಲ್ಲ ಎಂದಿದ್ದಾರೆ ವಿನಯ್. ಅಂದೊಂದಿತ್ತು ಕಾಲ ಶೂಟಿಂಗ್ ನಡೆಯುತ್ತಿದೆ.

ಪುಷ್ಕರ್ ಜೊತೆಗಿನ ಟೆನ್ ಚಿತ್ರ ಕಂಪ್ಲೀಟ್ ಆಗಿದ್ದು, ರಿಲೀಸ್ ಆಗೋಕೆ ರೆಡಿ. ಯಾವಾಗ ಅನ್ನೋದು ಸಸ್ಪೆನ್ಸ್. ಇದರ ಮಧ್ಯೆ ಪೆಪೆ ಚಿತ್ರದ ಕೆಲಸವೂ ಶುರುವಾಗಿದೆ.