ಭಜರಂಗಿ 2 ಮತ್ತು ಸಲಗ ನಂತರ ಇನ್ನೊಂದು ಚಿತ್ರ ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಂಡಿದೆ. ಡಾಲಿ ಧನಂಜಯ್ ಹೀರೋ ಆಗಿರುವ ಬಡವ ರ್ಯಾಸ್ಕಲ್ ಸಿನಿಮಾ ಸೆ.24ಕ್ಕೆ ರಿಲೀಸ್ ಆಗಲಿದೆ. ಶೂಟಿಂಗ್, ಡಬ್ಬಿಂಗ್ ಎಲ್ಲವನ್ನೂ ಮುಗಿಸಿದ್ದ ಬಡವ ರ್ಯಾಸ್ಕಲ್ ಸಿನಿಮಾ, ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ಬಿಡುಗಡೆಗೆ ಸಿದ್ಧತೆ ನಡೆಸಿದೆ.
ಧನಂಜಯ್ ಹೀರೋ ಆಗಿದ್ದು, ಅಮೃತಾ ಅಯ್ಯಂಗಾರ್ ಮತ್ತೊಮ್ಮೆ ಡಾಲಿಗೆ ಜೊತೆಯಾಗಿದ್ದಾರೆ. ಇದೊಂದು ಮಿಡ್ಲ್ ಕ್ಲಾಸ್ ಗ್ಯಾಂಗ್ ಸ್ಟರ್ ಹುಡುಗರ ಕಥೆ ಎಂದಿರುವ ಧನಂಜಯ್, ರಾ ಕಥೆ ಹೊಂದಿದೆ. ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಶಂಕರ್ ಗುರು.
ಅಂದಹಾಗೆ ಇದು ಡಾಲಿ ಧನಂಜಯ್ ಅವರ ಮೊದಲ ನಿರ್ಮಾಣ ಸಾಹಸ. ಚಿತ್ರವನ್ನು ಡಾಲಿ ಪಿಕ್ಚರ್ಸ್‍ನಲ್ಲಿ ನಿರ್ಮಾಣ ಮಾಡಿದ್ದು, ಸಾವಿತ್ರಮ್ಮ ಅಡವಿಸ್ವಾಮಿ ನಿರ್ಮಾಪಕರು. ಕೆಆರ್‍ಜಿ ಸ್ಟುಡಿಯೋಸ್ ಮೂಲಕ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ.