ಕೋಟಿಗೊಬ್ಬ 3 ಚಿತ್ರದ ಡಬ್ಬಿಂಗ್ ಮುಗಿಸಿರುವ ಕಿಚ್ಚ ಸುದೀಪ್, ಚಿತ್ರ ಶೀಘ್ರದಲ್ಲೇ ರಿಲೀಸ್‍ಗೆ ರೆಡಿ ಎಂದಿದ್ದಾರೆ. ಮತ್ತೊಮ್ಮೆ ಸತ್ಯ ಮತ್ತು ಶಿವನಾಗುವ ಅವಕಾಶ ಬಂದಿದೆ. ಎಲ್ಲರದ್ದೂ ಡಬ್ಬಿಂಗ್ ಮುಗಿದಿತ್ತು. ನನ್ನೊಬ್ಬನದ್ದೇ ಬಾಕಿಯಿತ್ತು. ನಾನೂ ಈಗ ಡಬ್ಬಿಂಗ್ ಮುಗಿಸಿದ್ದೇನೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಂತಾಗುತ್ತದೆ. ಸದ್ಯದಲ್ಲೇ ರಿಲೀಸ್ ಆಗಲಿದೆ' ಎಂದಿರುವ ಸುದೀಪ್, ಶೀಘ್ರದಲ್ಲೇ ಕೋಟಿಗೊಬ್ಬನಾಗಿ ತೆರೆಗೆ ಬರಲಿದ್ದಾರೆ.
ಸೂರಪ್ಪ ಬಾಬು ನಿರ್ಮಾಣದ ಚಿತ್ರಕ್ಕೆ ಶಿವ ಕಾರ್ತಿಕ್ ನಿರ್ದೇಶಕ. ಮಡೋನ್ನಾ ಸೆಬಾಸ್ಟಿಯನ್ ನಾಯಕಿಯಾಗಿರುವ ಚಿತ್ರದಲ್ಲಿ ಶ್ರದ್ಧಾ ದಾಸ್, ರವಿಶಂಕರ್, ಅಫ್ತಾಬ್ ಶಿವದಾಸನಿ, ಡ್ಯಾನಿಷ್ ಅಖ್ತರ್ ನಟಿಸಿದ್ದಾರೆ. ಪಟಾಕಿ ಪೋರಿಯಾಗಿ ಐಟಂ ಸಾಂಗ್‍ಗೆ ಹೆಜ್ಜೆ ಹಾಕಿದ್ದಾರೆ ಅಶಿಕಾ ರಂಗನಾಥ್.