ಬಹುತೇಕರಿಗೆ ನೆನಪಿದೆಯೋ.. ಇಲ್ಲವೋ ಗೊತ್ತಿಲ್ಲ. ಜುಲೈ 16. ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಬೇಕಿದ್ದ ದಿನ. ಕೋವಿಡ್, ಲಾಕ್ ಡೌನ್ ಕಾಟ ಇಲ್ಲದೇ ಹೋಗಿದ್ದರೆ.. ಇಷ್ಟೊತ್ತಿಗೆ ಬಾಕ್ಸಾಫೀಸಿನಲ್ಲಿ ದಾಖಲೆ ಬರೆಯುತ್ತಿತ್ತು ಕೆಜಿಎಫ್ ಚಾಪ್ಟರ್ 2. ಆದರೆ.. ಹಾಗಾಗಲಿಲ್ಲ. ಆದರೇನಂತೆ.. ಚಿತ್ರದ ಟ್ರೇಲರ್ ಇನ್ನೊಂದು ದಾಖಲೆ ಬರೆದಿದೆ.
ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್‍ನ್ನು ಯೂಟ್ಯೂಬ್‍ನಲ್ಲಿ ನೋಡಿದವರ ಸಂಖ್ಯೆ 200 ಮಿಲಿಯನ್. ಅಂದರೆ 20 ಕೋಟಿ ವೀಕ್ಷಣೆ. ಹಿಂದಿಯೂ ಸೇರಿದಂತೆ ಯಾವ ಚಿತ್ರದ ಟ್ರೇಲರ್ ಕೂಡಾ ಈ ಮಟ್ಟಿನ ವೀಕ್ಷಣೆ ಪಡೆದಿಲ್ಲ ಎಂಬುದು ನೆನಪಿನಲ್ಲಿರಲಿ. ಅಷ್ಟೇ ಅಲ್ಲ.. ಈ ದಾಖಲೆ ಅರ್ಥಾತ್ 20 ಕೋಟಿ ವೀಕ್ಷಣೆಯ ದಾಖಲೆ ಹೊಂಬಾಳೆ ಫಿಲಮ್ಸ್‍ನ ಅಧಿಕೃತ ಯೂಟ್ಯೂಬ್ ಪೇಜ್‍ನಲ್ಲಿ ಮಾತ್ರ. ಉಳಿದಂತೆ ಅದನ್ನು ಕಾಪಿ ಮಾಡಿ.. ಮಿಕ್ಸ್ ಮಾಡಿ.. ಸ್ಕೂಪ್ ಮಾಡಿ.. ಸ್ಪೂಫ್ ಮಾಡಿ.. ರಿವ್ಯೂ ಮಾಡಿ.. ಡಿಸೈನ್ ಡಿಸೈನ್ ಆಗಿ ಪ್ರಸಾರವಾಗಿರುವ ವಿಡಿಯೋಗಳೂ ಲಕ್ಷ ಲಕ್ಷ ವ್ಯೂವ್ಸ್ ಪಡೆದಿವೆ. ಅವುಗಳ ಲೆಕ್ಕ ಈ 20 ಕೋಟಿ ವೀಕ್ಷಕರ ವ್ಯಾಪ್ತಿಯಲ್ಲಿ ಬರಲಿಲ್ಲ. ಇದು ಕೇವಲ ಹೊಂಬಾಳೆ ಯೂಟ್ಯೂಬ್ ಚಾನೆಲ್ಲಿನ ಅಧಿಕೃತ ಲೆಕ್ಕ. ಈ ದಾಖಲೆ ಚಿತ್ರವನ್ನು ರಿಲೀಸ್ ಮಾಡೋದಾಗಿ ಘೋಷಿಸಿದ್ದ ದಿನವೇ ಆಗಿರೋದು ವಿಶೇಷ.
ವಿಜಯ್ ಕಿರಗಂದೂರು-ಪ್ರಶಾಂತ್ ನೀಲ್-ಯಶ್-ರವೀನಾ ಟಂಡನ್-ಸಂಜಯ್ ದತ್-ಪ್ರಕಾಶ್ ರೈ-ಶ್ರೀನಿಧಿ ಶೆಟ್ಟಿ ಕಾಂಬಿನೇಷನ್‍ನ ಭರ್ಜರಿ ಚಿತ್ರವಿದು. ಯಾವಾಗ ರಿಲೀಸ್ ಆನ್ನೋದು ಗೊತ್ತಿರುವುದು ಕೆಲವೇ ಕೆಲವರಿಗೆ ಮಾತ್ರ. ಸದ್ಯಕ್ಕಂತೂ ಇಲ್ಲ.