ಜೊತೆ ಜೊತೆಯಲಿ ಸೀರಿಯಲ್ ಮೂಲಕ ಖ್ಯಾತರಾಗಿರೋ ನಟಿ ಮೇಘಾ ಶೆಟ್ಟಿ, ನಿರ್ದೇಶಕ ಶಶಾಂಕ್ ಅವರ 360 ಡಿಗ್ರಿ ಲವ್ ಕಣ್ಣಿಗೆ ಬಿದ್ದಿದ್ದಾರೆ. ಮೇಘಾ ಶೆಟ್ಟಿಗೆ ಇದು ಮೊದಲ ಸಿನಿಮಾ ಏನಲ್ಲ. ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆಯೇ ಗೋಲ್ಡನ್ ಚಾನ್ಸ್ ಸಿಕ್ಕಿದೆ. ಶಶಾಂಕ್ ಚಿತ್ರದಲ್ಲಿ..
ಶಶಾಂಕ್ ಲವ್ 360 ಸಿನಿಮಾ ಮಾಡುತ್ತಿದ್ದು, ಹೊಸಬರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರವೀಣ್ ಎಂಬ ಹುಡುಗ ಲವ್ 360 ಹೀರೋ. ಮೇಘಾ ಶೆಟ್ಟಿ ಹೀರೋಯಿನ್. ಚಿತ್ರವಿನ್ನೂ ಪ್ರಿ-ಪ್ರೊಡಕ್ಷನ್ ಸ್ಟೇಜ್‍ನಲ್ಲಿದೆ.