` ಕೆಜಿಎಫ್ 2, ಚಾಪ್ಟರ್ 1ಗಿಂತ ಅದ್ಭುತ : ಡಬ್ಬಿಂಗ್ ಕಲಾವಿದೆ ಅಮಲಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕೆಜಿಎಫ್ 2, ಚಾಪ್ಟರ್ 1ಗಿಂತ ಅದ್ಭುತ : ಡಬ್ಬಿಂಗ್ ಕಲಾವಿದೆ ಅಮಲಾ
ಕೆಜಿಎಫ್ 2, ಚಾಪ್ಟರ್ 1ಗಿಂತ ಅದ್ಭುತ : ಡಬ್ಬಿಂಗ್ ಕಲಾವಿದೆ ಅಮಲಾ

ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗೋಕೆ ರೆಡಿಯಾಗಿದೆ. ಬಹುಶಃ ಕೊರೊನಾ ಭೀತಿ ಮುಗಿಯುವವರೆಗೆ ಕೆಜಿಎಫ್ ರಿಲೀಸ್ ಆಗಲ್ಲ. ಇದರ ನಡುವೆ ತೆಲುಗಿನಲ್ಲಿ ಚಾಪ್ಟರ್2 ಡಬ್ಬಿಂಗ್ ಮಾಡಿರುವ ಕಲಾವಿದೆ ಅಮಲಾ, ಚಾಪ್ಟರ್ 1ಗಿಂತ ಚಾಪ್ಟರ್ 2 ಅದ್ಭುತವಾಗಿದೆ. ಕಂಟೆಂಟ್ ಈಸ್ ಕಿಂಗ್ ಎಂದಿದ್ದಾರೆ.

ರಾಕಿಭಾಯ್ ತಾಯಿಯ ಪಾತ್ರಕ್ಕೆ ತೆಲುಗಿನಲ್ಲಿ ಅಮಲಾ ಡಬ್ ಮಾಡಿದ್ದಾರೆ. 2ನೇ ಭಾಗದಲ್ಲಿ ತಾಯಿ ಮಗನ ಬಾಂಧವ್ಯದ ದೃಶ್ಯಗಳು ಇನ್ನೂ ಚೆನ್ನಾಗಿವೆ. ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರಿಗೆ ರೋಮಾಂಚನ ಹುಟ್ಟಿಸುತ್ತವೆ. ಕಲಾವಿದರ ಅಭಿನಯ, ಮೇಕಿಂಗ್, ಸಂಭಾಷಣೆ ಒಂದಕ್ಕಿಂತ ಒಂದು ಚೆನ್ನಾಗಿವೆ ಎಂದಿದ್ದಾರೆ ಅಮಲಾ.