`ನಾನು ಉಮಾಪತಿಯೇ ಇದನ್ನೆಲ್ಲ ಮಾಡಿಸಿದ್ದಾರೆ ಎನ್ನುತ್ತಿಲ್ಲ. ಅದನ್ನು ಹೇಳೋಕೆ ಸಮಯವೂ ಇದಲ್ಲ. ಆದರೆ ಎಲ್ಲವೂ ಉಮಾಪತಿಯವರೇ ಏನೋ ತಪ್ಪು ಮಾಡಿದ್ದಾರೆ ಎಂದು ತೋರಿಸುತ್ತಿದೆ. ಅರುಣಾ ಕುಮಾರಿ ಉಮಾಪತಿ ಹೆಸರು ಹೇಳಿದ್ದಾಳೆ. ಹೀಗಾಗಿ ಉಮಾಪತಿಯೇ ಇದನ್ನು ಸ್ಪಷ್ಟಪಡಿಸಬೇಕು'' 25 ಕೋಟಿ ಸಾಲಕ್ಕಾಗಿ ದರ್ಶನ್ ಹೆಸರು ಬಳಸಿಕೊಳ್ಳಲು ಯತ್ನಿಸಿದ ಪ್ರಕರಣದಲ್ಲಿ ದರ್ಶನ್ ಉಮಾಪತಿಯವರ ಬಗ್ಗೆ ಹೇಳಿದ ಮಾತಿದು. ಆಗ ದರ್ಶನ್ ಜೊತೆ ಇದೇ ಪ್ರಕರಣದಲ್ಲಿ ಕೇಳಿ ಬರುತ್ತಿರುವ ಹರ್ಷ, ರಾಕೇಶ್ ಇದ್ದರು. ಅರುಣಾ ಕುಮಾರಿಯ ಪತಿ ಕುಮಾರ್ ಎಂಬುವವರೂ ಇದ್ದರು. ಉಮಾಪತಿ ಮಾತ್ರ ಇರಲಿಲ್ಲ.
ರಾಬರ್ಟ್ ಚಿತ್ರದ ಬಿಡುಗಡೆ ವೇಳೆ ದರ್ಶನ್ ಉಮಾಪತಿಯವರನ್ನು ಹೊಗಳಿದ್ದನ್ನು ಇಡೀ ಕರ್ನಾಟಕ ನೋಡಿದೆ. ಉಮಾಪತಿ ದರ್ಶನ್ ಅವರಿಗೆ ಅಣ್ಣನ ಸ್ಥಾನ ನೀಡಿದ್ದರು. ಆದರೆ ಈ ಪ್ರಕರಣದ ನಂತರ ಎಲ್ಲವೂ ಬದಲಾಗಿ ಹೋಗಿದೆ. ಇಡೀ ದಿನ ಸಂಪರ್ಕದಲ್ಲಿದ್ದ ಉಮಾಪತಿಯವರಿಗೆ ಪ್ರೆಸ್ಮೀಟ್ ಕರೆಯುತ್ತಿದ್ದೇನೆ ಎಂಬ ವಿಷಯವನ್ನೂ ದರ್ಶನ್ ತಿಳಿಸಿರಲಿಲ್ಲ. ನನ್ನದೇನೂ ತಪ್ಪಿಲ್ಲ. 25 ಕೋಟಿಗಾಗಿ ದರ್ಶನ್ ಜೊತೆಗಿನ ಸ್ನೇಹ ಕಳೆದುಕೊಳ್ತೀನಾ? ಹೆಚ್ಎಸ್ಆರ್ ಲೇಔಟ್ನಲ್ಲೇ ನನಗೆ ಕೋಟ್ಯಂತರ ಆಸ್ತಿ ಇದೆ. ಸುಮಾರು 80 ಎಕರೆ ಜಮೀನಿದೆ. ನನ್ನ 5 ಸೈಟು ಮಾರಿದರೆ 25 ಕೋಟಿ ಬರುತ್ತೆ. ನನಗೆ ಮೋಸ ಮಾಡುವ ದರ್ದೂ ಇಲ್ಲ ಎನ್ನುತ್ತಾರೆ ಉಮಾಪತಿ. ಜೊತೆಗೆ ನನ್ನ ಬಳಿ ಇರುವ ಆ 3 ರಹಸ್ಯಗಳನ್ನು ಸ್ಫೋಟಿಸಿದರೆ ಬೆಂಕಿ ಹೊತ್ತಿಕೊಳ್ಳುತ್ತೆ ಎಂದಿರೋ ಉಮಾಪತಿ, ಒಂದು ಕುತೂಹಲವನ್ನು ಕಾದಿಟ್ಟಿದ್ದಾರೆ.