ದೃಶ್ಯ. ಮಲಯಾಳಂನ ಈ ಸಿನಿಮಾ ದೇಶದಲ್ಲೇ ಹಲವು ಭಾಷೆಗಳಿಗೆ ರೀಮೇಕ್ ಆದ ಸಿನಿಮಾ. ಕನ್ನಡದಲ್ಲಿ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸೂಪರ್ ಹಿಟ್ ಆಗಿತ್ತು. ದೃಶ್ಯಂ 2 ಸಿನಿಮಾ ಬಂದಾಗ ಒಟಿಟಿಯಲ್ಲಿ ಭಾರಿ ಸದ್ದು ಮಾಡಿತ್ತು. ಈಗಾಗಲೇ ತಮಿಳು, ತೆಲುಗಿನಲ್ಲಿ ರೀಮೇಕ್ ಆಗುತ್ತಿದೆ. ಕನ್ನಡದಲ್ಲೂ ಅದೇ ಟೀಂ ರಿಪೀಟ್ ಆಗಿದೆ.
ರವಿಚಂದ್ರನ್, ನವ್ಯಾ ನಾಯರ್, ಆರೋಹಿ ನಾರಾಯಣ್, ಶಿವಾಜಿ ಪ್ರಭು, ಆಶಾ ಶರತ್ ಎಲ್ಲರೂ ಇರುತ್ತಾರೆ. ಪ್ರಮೋದ್ ಶೆಟ್ಟಿ ಹೊಸ ಸೇರ್ಪಡೆ. ಈಗ ಇದೇ ಚಿತ್ರದಲ್ಲಿ ಅನಂತ್ ನಾಗ್ ನಟಿಸುತ್ತಿದ್ದಾರಂತೆ. ಅನಂತ್ ಓಕೆ ಎಂದಿದ್ದಾರೆ. ಆದರೆ.. ಪಾತ್ರ ಯಾವುದು? ಕಾದಂಬರಿಕಾರನ ಪಾತ್ರ ಇರಬಹುದು ಎನ್ನುವುದು ಒಂದು ಊಹೆ. ಪಿ.ವಾಸು ಅನಂತ್ ಅವರಿಗೆ ಯಾವ ಪಾತ್ರ ಕೊಟ್ಟಿದ್ದಾರೋ ಗೊತ್ತಿಲ್ಲ.