ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿಯಲ್ಲಿರೋ 7 ವರ್ಷಗಳ ನಂತರ ನಾನು ರೆಡಿ ಎನ್ನುತ್ತಿದ್ದಾರೆ. ರಿಚರ್ಡ್ ಆಂಟನಿ ರೂಪದಲ್ಲಿ. ಇದು ಉಳಿದವರು ಕಂಡಂತೆ ಚಿತ್ರದ ಸೀಕ್ವೆಲ್ಲಾ.. ಪ್ರೀಕ್ವೆಲ್ಲಾ.. ಎರಡೂ ಇರಬಹುದು. 2014ರಲ್ಲಿ ರಿಲೀಸ್ ಆಗಿದ್ದ ಉಳಿದವರು ಕಂಡಂತೆ ಡಿಫರೆಂಟ್ ಅನ್ನೋ ಕಾರಣಕ್ಕೆ ಸದ್ದು ಮಾಡಿದ್ದ ಸಿನಿಮಾ. ಈಗ ರಿಚರ್ಡ್ ಆಂಟನಿಯಾಗಿ ತೆರೆಗೆ ತರಲು ಹೊರಟಿದ್ದಾರೆ ರಕ್ಷಿತ್ ಶೆಟ್ಟಿ. ಬಂಡವಾಳ ಹೂಡುತ್ತಿರುವುದು ದೇಶದ ಪ್ರತಿಷ್ಠಿತ ಬ್ಯಾನರುಗಳಲ್ಲಿ ಒಂದಾದ ಹೊಂಬಾಳೆ ಫಿಲಮ್ಸ್.
ಈ ಚಿತ್ರದ ಕಥೆ ಎರಡು ಭಾಗಗಲ್ಲಿ ನಡೆಯುತ್ತೆ. ರಿಚ್ಚಿ ಪಾತ್ರದ ಕಥೆ ಶುರುವಾಗುತ್ತದಲ್ಲಾ.. ಅಲ್ಲಿಂದ ಉಳಿದವರು ಕಂಡಂತೆ ಸಿನಿಮಾ ಮುಗಿಯುವವರೆಗೆ ಒಂದು ಭಾಗ.. ಇನ್ನೊಂದು ಉಳಿದವರು ಕಂಡಂತೆ ಚಿತ್ರದ ನಂತರದ್ದು ಎಂದಿರೋ ರಕ್ಷಿತ್ ಶೆಟ್ಟಿ ಟೀಸರ್‍ನಲ್ಲಿ ರಿಚ್ಚಿಯ ಸಮಾಧಿ, ಕಡಲ ರಾಜನ ಬಗ್ಗೆ ಮಾತನಾಡೋ ಅಚ್ಯುತ್, ಸಮಾಧಿಯನ್ನು ಕುಕ್ಕುತ್ತಿರುವ ಕಾಗೆ.. ಜೊತೆ ಜೊತೆಗೆ ಹೃದಯಕ್ಕೇ ನಾಟುವ ಸಂಭಾಷಣೆ.. ಇಷ್ಟನ್ನು ಟೀಸರ್‍ನಲ್ಲಿ ತೋರಿಸಿದ್ದಾರೆ ರಕ್ಷಿತ್ ಶೆಟ್ಟಿ.
ವಿಜಯ್ ಕಿರಗಂದೂರು ಪ್ರೊಡ್ಯೂಸರ್ ಆದರೆ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಕರಮ್ ಚಾವ್ಲಾ ಕ್ಯಾಮೆರಾ ಚಿತ್ರಕ್ಕಿದೆ.