ಪುನೀತ್ ರಾಜ್‍ಕುಮಾರ್, ಹೊಂಬಾಳೆ ಫಿಲಮ್ಸ್ ಮತ್ತೆ ಒಂದಾಗಿವೆ. ಇದು 4ನೇ ಬಾರಿ. ಈ ಬಾರಿ ಈ ಜೋಡಿಯ ಜೊತೆ ಸೇರಿರುವುದು ಪವನ್ ಕುಮಾರ್. ಕನ್ನಡಿಗರಿಗೆ ಲೂಸಿಯಾ ಪವನ್ ಎಂದೇ ಚಿರಪರಿಚಿತರಾಗಿರೋ ವಿಭಿನ್ನ ಕಥೆಗಳ ಡೈರೆಕ್ಟರ್. ಆ ವಿಭಿನ್ನತೆ ಪುನೀತ್ ಅವರ ಚಿತ್ರದ ಟೈಟಲ್ಲಿನಲ್ಲಿಯೂ ಕಾಣಿಸಿದೆ. ದ್ವಿತ್ವ.
ಹೊಂಬಾಳೆ ಫಿಲಮ್ಸ್ ಚಿತ್ರ ಘೋಷಣೆ ಮಾಡಿದ್ದೇ ತಡ, ಎಲ್ಲರಿಗೂ ಇಷ್ಟವಾಗಿದ್ದು ಚಿತ್ರದ ಪೋಸ್ಟರ್ ಮತ್ತು ಟೈಟಲ್. ಟೈಟಲ್ ಕ್ಯಾಚಿಯಾಗಿದ್ದು, ಡಿಫರೆಂಟ್ ಎನಿಸಿದ್ದರ ಜೊತೆಗೆ ಹಾಗೆಂದರೆ ಏನು ಅನ್ನೋ ಪ್ರಶ್ನೆಯೂ ಉದ್ಭವವಾಯ್ತು. ಉತ್ತರ ಸಿಂಪಲ್. ದ್ವಿತ್ವ ಎಂದರೆ ಎರಡು ವ್ಯಕ್ತಿತ್ವ. ಇದು ಸಂಸ್ಕøತ ಮೂಲದ ಪದ. ಸ್ಪ್ಲಿಟ್ ಅಥವಾ ಮಲ್ಟಿ ಪರ್ಸನಾಲಿಟಿಯನ್ನು ಈ ಪದದಲ್ಲೂ ಕರೆಯಬಹುದು. ಪವನ್ ಕುಮಾರ್ ಈಗಾಗಲೇ ಇದು ಸೈಕಲಾಜಿಕಲ್ ಥ್ರಿಲ್ಲರ್ ಡ್ರಾಮಾ ಎಂದಿರೋದ್ರಿಂದ ಇಲ್ಲಿ ಸ್ಪ್ಲಿಟ್ ಪರ್ಸನಾಲಿಟಿ ಡಿಸಾರ್ಡರ್ ಕಥೆ ಇದ್ದರೂ ಆಶ್ಚರ್ಯವಿಲ್ಲ.
ತುಂಬಾ ವರ್ಷದಿಂದ ಕಾಡುತ್ತಿದ್ದ ಕಥೆಯಿದು. ಗಾಳಿಪಟ 2 ಶೂಟಿಂಗ್‍ಗೆ ಹೋಗೋಕು ಮುನ್ನ ಥಾಯ್ಲೆಂಡ್‍ಗೆ ಹೋಗಿದ್ದಾಗ ಚಿತ್ರಕಥೆ ಸಿದ್ಧವಾಯ್ತು. ದ್ವಿತ್ವ ಅನ್ನೋ ಟೈಟಲ್ಲೇ ಇರಲಿ ಎಂದ ಪುನೀತ್ ಮತ್ತು ವಿಜಯ್ ಕಿರಗಂದೂರು ಅವರಿಗೆ ಥ್ಯಾಂಕ್ಸ್ ಎಂದಿದ್ದಾರೆ ಪವನ್.
ಹೊಂಬಾಳೆ ನನ್ನ 2ನೇ ಮನೆಯಿದ್ದಂತೆ. ಪವನ್ ಸಿನಿಮಾಗಳನ್ನು ನೋಡುತ್ತಿದ್ದೆ. ಈಗ ಜತೆಯಾಗಿ ಕೆಲಸ ಮಾಡ್ತಿದ್ದೇನೆ. ಯುನಿಕ್ ಕಥೆ ಹೇಳುತ್ತಾರೆ ಅನ್ನೋ ನಂಬಿಕೆ ಇದೆ. ನನ್ನನ್ನು ನಾನೇ ನೋಡಿಕೊಳ್ಳೋಕೆ ಕಾಯ್ತಿದ್ದೇನೆ ಎಂದಿದ್ದಾರೆ ಪುನೀತ್.
ಈ ಚಿತ್ರದಲ್ಲಿ ಡಿಫರೆಂಟ್ ಅಪ್ಪು ಕಾಣಿಸೋದು ಖಂಡಿತಾ ಅನ್ನೋ ಭರವಸೆ ಕೊಟ್ಟಿದ್ದಾರೆ ವಿಜಯ್ ಕಿರಗಂದೂರು.