2021ರ ಸೆನ್ಸೇಷನಲ್ ಮೂವಿ ಕೆಜಿಎಫ್ ಚಾಪ್ಟರ್ 2. ಕೆಜಿಎಫ್ ಚಾಪ್ಟರ್ 1, ಇದ್ದಬದ್ದ ದಾಖಲೆಗಳನ್ನೆಲ್ಲ ಗುಡಿಸಿ, ಹೊಸ ದಾಖಲೆ ಬರೆದಿತ್ತು. ಅದನ್ನೂ ಮೀರಿ ಮುನ್ನಡೆಯುವ ಭರವಸೆ ಹುಟ್ಟಿಸಿರುವುದು ಕೆಜಿಎಫ್ 2. ಹೀಗಾಗಿಯೇ ಚಿತ್ರದ ಆಡಿಯೋ ರೈಟ್ಸ್ ಕೂಡಾ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ.
ಕೆಜಿಎಫ್ ಚಾಪ್ಟರ್ 1 ಆಡಿಯೋ ರೈಟ್ಸ್‍ನ್ನು 3.6 ಕೋಟಿಗೆ ಖರೀದಿಸಿದ್ದ ಲಹರಿ ಸಂಸ್ಥೆ, ಕೆಜಿಎಫ್ ಚಾಪ್ಟರ್ 2 ಆಡಿಯೋ ರೈಟ್ಸ್‍ನ್ನೂ ಖರೀದಿಸಿದೆ. ಅದೂ ಡಬಲ್ ರೇಟ್‍ನಲ್ಲಿ. ಅರ್ಥಾತ್ 7.2 ಕೋಟಿಗೆ. ಚಾಪ್ಟರ್ 1ಗೆ ಕೊಟ್ಟ ಹಣಕ್ಕಿಂತ ಕರೆಕ್ಟ್ ಆಗಿ ಡಬಲ್ ಅಮೌಂಟ್. ಲಹರಿ ಮ್ಯೂಸಿಕ್, ಈಗ ದ.ಭಾರತದ ಖ್ಯಾತ ಆಡಿಯೋ ಸಂಸ್ಥೆಗಳಲ್ಲಿ ಒಂದು. ಲೆಕ್ಕಾಚಾರ ತಪ್ಪಿಲ್ಲ.
ಹೀಗಾಗಿಯೇ ಪಾರ್ಟ್ 2 ಮೇಲೆ ಇನ್ನೂ ಇನ್ನೂ ಇನ್ನೂ ಭರವಸೆ ಹುಟ್ಟಿದೆ. ಪ್ರಶಾಂತ್ ನೀಲ್, ಯಶ್, ವಿಜಯ್ ಕಿರಗಂದೂರು ಕಾಂಬಿನೇಷನ್‍ಗೆ ಚಾಪ್ಟರ್ 2ನಲ್ಲಿ ಸಂಜಯ್ ದತ್, ರವೀನಾ ಟಂಡನ್ ಕೂಡಾ ಸೇರಿದ್ದಾರೆ. ರಿಲೀಸ್ ಯಾವಾಗ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.