` ಗೂಗಲ್ ದುರಹಂಕಾರ : ಡಾ.ರಾಜ್ `ಹಾಫ್ ಬಾಯ್ಲ್' ನಟನಂತೆ..! - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
ಗೂಗಲ್ ದುರಹಂಕಾರ : ಡಾ.ರಾಜ್ `ಹಾಫ್ ಬಾಯ್ಲ್' ನಟನಂತೆ..!
ಗೂಗಲ್ ದುರಹಂಕಾರ : ಡಾ.ರಾಜ್ `ಹಾಫ್ ಬಾಯ್ಲ್' ನಟನಂತೆ..!

ಡಾ.ರಾಜ್ ಕುಮಾರ್ ಹಾಫ್ ಬಾಯ್ಲ್ ನಟ. ಹೌದು, ಇಂತಾದ್ದೊಂದು ಎಡವಟ್ಟು ಈಗ ಗೂಗಲ್‍ನಲ್ಲಿ ಸಿಗುತ್ತಿದೆ. ವಿಕ್ರಂ ವೇದ ಅನ್ನೋ ತಮಿಳು ಚಿತ್ರ ಬಂದಿತ್ತಲ್ಲಾ.. ಮಾಧವನ್, ಶ್ರದ್ಧಾ ಶ್ರೀನಾಥ್, ವಿಜಯ್ ಸೇತುಪತಿ ನಟಿಸಿದ್ದ ಚಿತ್ರವದು. ಆ ಚಿತ್ರದಲ್ಲಿ ಹಾಫ್ ಬಾಯ್ಲ್ ಅನ್ನೋ ಕ್ಯಾರೆಕ್ಟರ್ ಇತ್ತು. ಆ ಪಾತ್ರದಲ್ಲಿ ನಟಿಸಿದ್ದವನ ಹೆಸರು ರಾಜ್ ಕುಮಾರ್. ಆದರೆ ಗೂಗಲ್‍ನಲ್ಲಿ ಆ ಪಾತ್ರವನ್ನು ಡಾ.ರಾಜ್ ಕುಮಾರ್ ಮಾಡಿದ್ದರು ಎನ್ನುವ ರೀತಿ ತೋರಿಸಲಾಗುತ್ತಿದೆ. ಹಾಫ್ ಬಾಯ್ಲ್ ಕ್ಯಾಸ್ಟ್ ಲಿಸ್ಟ್‍ನಲ್ಲಿ ಹಾಫ್ ಬಾಯ್ಲ್ ಪಾತ್ರಧಾರಿಯನ್ನು ತೋರಿಸುವ ಜಾಗದಲ್ಲಿ ಕಸ್ತೂರಿ ನಿವಾಸದ ಅಣ್ಣಾವ್ರ ಚಿತ್ರವನ್ನು ಅಟ್ಯಾಚ್ ಮಾಡಿದೆ ಗೂಗಲ್.

ಇದ್ಯಾಕೋ ಅತಿಯಾಯ್ತು. ಮೊದಲು ಇದನ್ನು ರಿಮೂವ್ ಮಾಡಿ ಎಂದು ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವರು ಈಗಾಗಲೇ ಗೂಗಲ್‍ನ್ನು ಒತ್ತಾಯಿಸಿದ್ದಾರೆ. ಗೂಗಲ್ ದುರಹಂಕಾ ಎಷ್ಟರಮಟ್ಟಿಗೆ ಇದೆಯೆಂದರೆ, ಇಷ್ಟೆಲ್ಲ ಆದ ನಂತರವೂ ಅದನ್ನು ರಿಮೂವ್ ಮಾಡಿಲ್ಲ.

ಡಾ.ರಾಜ್ ಮತ್ತು ಕರ್ನಾಟಕದ ಬಾಂಧವ್ಯದ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಕನ್ನಡ ಎಂದರೆ ಡಾ.ರಾಜ್. ಡಾ.ರಾಜ್ ಎಂದರೆ ಕನ್ನಡ ಎಂಬಷ್ಟರಮಟ್ಟಿಗೆ ಪ್ರೀತಿ ಬಾಂಧವ್ಯ ಬೆರೆತಿದೆ. ಇತ್ತೀಚೆಗಷ್ಟೇ ಕನ್ನಡವನ್ನು ಜಗತ್ತಿನ ಕೆಟ್ಟ ಭಾಷೆ ಎಂದು ಯಾರೋ ತಲೆಕೆಟ್ಟವನು ಹಾಕಿದ್ದನ್ನು ವರ್ಷಗಟ್ಟಲೆ ಉಳಿಸಿಕೊಂಡಿದ್ದ ಗೂಗಲ್, ಸರ್ಕಾರವೇ ನೋಟಿಸ್ ನೀಡಿದ ಮೇಲೆ ಅದನ್ನು ರಿಮೂವ್ ಮಾಡಿತ್ತು. ಈಗ ಡಾ.ರಾಜ್ ಸರದಿ. ಚಿತ್ರರಂಗದಲ್ಲಿ ಎತ್ತರಎತ್ತರಕ್ಕೇರಿದರೂ ಜೀವನದುದ್ದಕ್ಕೂ ಅವಮಾನಗಳನ್ನು ಅನುಭವಿಸಿಕೊಂಡೇ ಬಂದವರು ಡಾ.ರಾಜ್. ಅದರ ಬಗ್ಗೆ ಒಮ್ಮೆಯೂ ಬಾಯ್ಬಿಟ್ಟವರಲ್ಲ. ಈಗ ಅವರನ್ನು ಒಂದು ತಮಿಳು ಚಿತ್ರದ ಕೆಟ್ಟ ಪಾತ್ರದಲ್ಲಿ ತೋರಿಸಲಾಗುತ್ತಿದೆ. ಗೂಗಲ್ ದುರಹಂಕಾರ ಇನ್ನೂ ಕೊನೆಯಾಗಿಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery