` ಸಂಚಾರಿ ವಿಜಯ್'ಗೆ ಮೇಲ್ಜಾತಿಯವರ ಕಿರುಕುಳ : ಕುಟುಂಬದವರು ಹೇಳಿದ ಅಸಲಿ ಕಥೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಸಂಚಾರಿ ವಿಜಯ್'ಗೆ ಮೇಲ್ಜಾತಿಯವರ ಕಿರುಕುಳ : ಕುಟುಂಬದವರು ಹೇಳಿದ ಅಸಲಿ ಕಥೆ
Sanchari Vijay Image

ಇತ್ತೀಚೆಗೆ ಅಕಾಲಿಕ ಮರಣಕ್ಕೀಡಾದ ನಟ ಸಂಚಾರಿ ವಿಜಯ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ವಿಚಿತ್ರ ಸುದ್ದಿಗಳು ಹರಿದಾಡುತ್ತಿವೆ. ವಿಜಯ್ ಅವರಿಗೆ ಅವರ ಹುಟ್ಟೂರಿನಲ್ಲೇ ಗೌರವ ಇರಲಿಲ್ಲ. ಪಂಚನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಮೇಲ್ಜಾತಿಯ ಜನ ವಿಜಯ್ ಅವರನ್ನು ಕೀಳಾಗಿ ಕಾಣುತ್ತಿದ್ದರು. ಕಿರುಕುಳ ನೀಡಿದ್ದರು. ಹೇಳಿಕೊಳ್ಳಲಾಗದ ನೋವಿನಲ್ಲಿ ವಿಜಯ್ ಬದುಕಿದ್ದರು. ಮನೆಯ ಬಾಡಿಗೆ ಕಟ್ಟಲೂ ಪರದಾಡುತ್ತಿದ್ದರು.. ಹೀಗೆಲ್ಲ ವರದಿಯಾಗಿತ್ತು. ಕೆಲವು  ಸೀನಿಯರ್ ಜರ್ನಲಿಸ್ಟುಗಳೇ ಈ ಬಗ್ಗೆ ಬರೆದಾಗ ನಿಜವಿದ್ದರೂ ಇರಬಹುದು ಎಂದುಕೊಂಡಿದ್ದವರು ಸಾವಿರಾರು ಜನ. ಆದರೆ ಅಸಲಿ ಕಥೆ ಬೇರೆಯೇ ಇದೆ.

ಈ ಎಲ್ಲ ಸುಳ್ಳು ಸುದ್ದಿಗಳಿಂದ ರೋಸಿ ಹೋದ ವಿಜಯ್ ಅವರ ಕುಟುಂಬಸ್ಥರೇ ಈಗ ಅದೆಲ್ಲವೂ ಅಪ್ಪಟ ಸುಳ್ಳು ಎಂದಿದ್ದಾರೆ. ವಿಜಯ್ ಅವರ ಸೋದರ ವಿರೂಪಾಕ್ಷ ಬಸವರಾಜು `ಪಂಚನಳ್ಳಿ ಗ್ರಾಮಸ್ಥರು ವಿಜಯ್‍ನನ್ನು ಮನೆಮಗನಂತೆ ನೋಡಿದ್ದರು. ನನ್ನ ತಮ್ಮನಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಾಗ ಊರಿಗೆಲ್ಲ ಊಟ ಹಾಕಿಸಿ, ಮೆರವಣಿಗೆ ಮಾಡಿ ಹಬ್ಬದಂತೆ ಸಂಭ್ರಮಿಸಿದ್ದರು. ಪಂಚನಳ್ಳಿ ಮತ್ತು ಸುತ್ತಮುತ್ತಲಿನ ಹಲವು ಹಳ್ಳಿಗಳಲ್ಲಿ ನಮ್ಮ ತಾಯಿ ಹೆರಿಗೆ ಮಾಡಿಸುತ್ತಿದ್ದರು. ಜಾತಿಭೇದ ಎಲ್ಲಿಂದ ಬರಬೇಕು. ವಿಜಯ್ ಅವರ ಅಂತ್ಯಕ್ರಿಯೆ ವೇಳೆ ಊರಿನ ಜನ ತೋರಿಸಿದ ಪ್ರೀತಿಯನ್ನು ನೀವೆಲ್ಲ ನೋಡಿದ್ದೀರಿ. ಅಷ್ಟೇ ಅಲ್ಲ, ವಿಜಯ್ ಅವರಿಗೆ ಆರ್ಥಿಕ ಸಮಸ್ಯೆಯೂ ಇರಲಿಲ್ಲ. ವಾರಕ್ಕೆ ಕನಿಷ್ಠ 3 ಜನ ನಿರ್ದೇಶಕರು ಬಂದು ಕಥೆ ಹೇಳುತ್ತಿದ್ದರು. ವಿಜಯ್ ತನಗೆ ಇಷ್ಟವಾಗಿದ್ದನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದ. ಆಫರ್‍ಗಳಿದ್ದವು. ಆದರೆ, ಹೊಸ ಹೊಸ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ. ಬಾಡಿಗೆ ಕಟ್ಟಲು ಆಗದಂತಾ ಕಷ್ಟವೇನೂ ಇರಲಿಲ್ಲ' ಎಂದಿದ್ದಾರೆ ವಿಜಯ್ ಅವರ ಅಣ್ಣ ಬಸವರಾಜ್.

ವಿಜಯ್ ಅವರ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಸುಳ್ ಸುದ್ದಿವೀರರಿಗೆ ಮನವಿ ಮಾಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery