` ಕಾರ್ಮಿಕರ ಕಷ್ಟಕ್ಕೆ ಶಿವಣ್ಣ 10 ಲಕ್ಷ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕಾರ್ಮಿಕರ ಕಷ್ಟಕ್ಕೆ ಶಿವಣ್ಣ 10 ಲಕ್ಷ
Shivarajkumar

ಕನ್ನಡ ಚಲನಚಿತ್ರ ಕಾರ್ಮಿಕರಿಗೆ ನಟ ಶಿವರಾಜ್ ಕುಮಾರ್ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂ. ಚೆಕ್ ನೀಡಿ ಕೋವಿಡ್ ಸಂಕಷ್ಟದಲ್ಲಿರುವ ಕಾರ್ಮಿಕರ ಹಿತಕ್ಕೆ ಬಳಸಿ ಎಂದು ಕೇಳಿದ್ದಾರೆ.

ಜೂನ್ 22ರಂದು ಪತ್ನಿ ಗೀತಾ ಅವರ ಹುಟ್ಟುಹಬ್ಬವೂ ಇದ್ದ ಕಾರಣ, ಗೀತಾ ಅವರ ಹುಟ್ಟುಹಬ್ಬದ ಕೊಡುಗೆಯಾಗಿ ಈ ನೆರವು ನೀಡಿದ್ದಾರೆ ಶಿವರಾಜ್ ಕುಮಾರ್. ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಅವರ ಸಮ್ಮುಖದಲ್ಲಿ ಚೆಕ್ ನೀಡಲಾಗಿದೆ.

ಇದಕ್ಕೂ ಮುನ್ನ ಕಾರ್ಮಿಕರಿಗಾಗಿ ನಟ ಯಶ್ ಒಂದೂವರೆ ಕೋಟಿ, ಪುನೀತ್ ರಾಜ್‍ಕುಮಾರ್ 10 ಲಕ್ಷ, ವಿಜಯ್ ಕಿರಗಂದೂರು 32 ಲಕ್ಷ ರೂ. ದೇಣಿಗೆ ನೀಡಿದ್ದರು. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery