` ಕವಲುದಾರಿ ರಿಷಿ ಹೊಸ ಸಿನಿಮಾ : ನೋಡಿ ಸ್ವಾಮಿ ಇವನಿರೋದೇ ಹೀಗೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕವಲುದಾರಿ ರಿಷಿ ಹೊಸ ಸಿನಿಮಾ : ನೋಡಿ ಸ್ವಾಮಿ ಇವನಿರೋದೇ ಹೀಗೆ..
Actor Rishi

ನೋಡಿ ಸ್ವಾಮಿ ನಾವಿರೋದೆ ಹೀಗೆ.. ಟೈಟಲ್ ಕೇಳಿದೊಡನೆ ಕನ್ನಡಿಗರ ಕಣ್ಣ ಮುಂದೆ ಶಂಕರ್ ನಾಗ್ ಬರುತ್ತಾರೆ. ಈಗ ರಿಷಿ ನೋಡಿ ಸ್ವಾಮಿ ಇವನಿರೋದೆ ಹೀಗೆ ಅನ್ನೋ ಟೈಟಲ್ ಸಿನಿಮಾದಲ್ಲಿ ಹೀರೋ ಆಗುತ್ತಿದ್ದಾರೆ. ಆಪರೇಷನ್ ಅಲಮೇಲಮ್ಮ, ಕವಲುದಾರಿ ನಂತರ ರಿಷಿ ನಟಿಸುತ್ತಿರುವ ಚಿತ್ರವಿದು.

ಲವ್ ಫೆಲ್ಯೂರ್ ಆದ ನಾಯಕ ಆತ್ಮಹತ್ಯೆ ಮಾಡಿಕೊಳ್ಳಲು ಹೊರಡುತ್ತಾನೆ. ಆತ್ಮಹತ್ಯೆ ಮಾಡಿಕೊಳ್ಳೋಕೆ ಆತ ಏನೇನೆಲ್ಲ ಸಾಹಸ ಮಾಡುತ್ತಾನೆ ಎನ್ನುವುದೇ ಚಿತ್ರದ ಸ್ಟೋರಿ. ಅದರಿಂದಾಗುವ ಅನಾಹುತಗಳೇ ಚಿತ್ರದ ಚಿತ್ರ ಕಥೆ. ನನ್ನ ಪಾತ್ರದ ಹೆಸರು ಸಾಯಿಕುಮಾರ್ ಎಂದಿದ್ದಾರೆ ರಿಷಿ.

ರಿಷಿಗೆ ಹೀರೋಯಿನ್ ಆಗಿರುವುದು ಧನ್ಯಾ ಬಾಲಕೃಷ್ಣ. ಕನ್ನಡದಲ್ಲಿ ನೋಡಿ ಸ್ವಾಮಿ ಇವನಿರೋದೆ ಹೀಗೆ ಚಿತ್ರ ತೆಲುಗಿನಲ್ಲಿ `ವದ್ದುರಾ ಸೋದರ' ಟೈಟಲ್‍ನಲ್ಲಿ ಬರಲಿದೆ. ಆಮ್ರೇಜ್ ಸೂರ್ಯವಂಶಿ ನಿರ್ಮಾಪಕರಾಗಿರುವ ಚಿತ್ರಕ್ಕೆ ಇಸ್ಲಾವುದ್ದೀನ್ ನಿರ್ದೇಶಕ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery