` ವಿಷ್ಣುವರ್ಧನ್ ಮರೆತಿರಿ. ಯಾಕೆ? : ಅನಿರುದ್ಧ ಪ್ರಶ್ನೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವಿಷ್ಣುವರ್ಧನ್ ಮರೆತಿರಿ. ಯಾಕೆ? : ಅನಿರುದ್ಧ ಪ್ರಶ್ನೆ
Vishnuvardhan, Anirudh

ಕನ್ನಡ ಚಲನಚಿತ್ರ ಕಲಾವಿದರ ಸಂಘದ ಕಟ್ಟಡದಲ್ಲಿ ಡಾ.ರಾಜ್‍ಕುಮಾರ್ ಹೆಸರಿದೆ. ಸಂಘದ ಕಟ್ಟಡಕ್ಕೇ ರಾಜ್ ಹೆಸರಿಟ್ಟಿದ್ದಾರೆ. ಆಡಿಟೋರಿಯಂ ಒಂದಕ್ಕೆ ಅಂಬರೀಷ್ ಹೆಸರೂ ಇದೆ. ಆದರೆ, ಡಾ.ವಿಷ್ಣುವರ್ಧನ್ ಹೆಸರು ಎಲ್ಲಿ? ಇದು ನಟ ಹಾಗೂ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಪ್ರಶ್ನೆ.

ಸಂಘದಲ್ಲಿ ಡಾ.ರಾಜ್ ಕುಮಾರ್, ಅಂಬರೀಷ್ ಹೆಸರು ಬಳಸಿಕೊಂಡಿದ್ದಾರೆ. ಇದು ಸಂತಸದ ವಿಷಯವೇ. ಆದರೆ, ವಿಷ್ಣುವರ್ಧನ್ ಅವರ ಹೆಸರು ಇಲ್ಲದಿರುವುದೂ ಅಷ್ಟೇ ಬೇಸರದ ಸಂಗತಿ ಎಂದಿದ್ದಾರೆ ಅನಿರುದ್ಧ.

ವಿಷ್ಣುವರ್ಧನ್ ಅವರು ಯಾವುದನ್ನೂ ಎಕ್ಸ್‍ಪೆಕ್ಟ್ ಮಾಡ್ತಾ ಇರಲಿಲ್ಲ. ಅಕ್ಸೆಪ್ಟ್ ಮಾಡ್ತಾ ಇದ್ದರು. ಡಾ.ರಾಜ್ ಕುಮಾರ್ ಅವರಿಗೆ ಸಲ್ಲುವ ಗೌರವ ಸಲ್ಲಬೇಕು. ಅದೇ ರೀತಿ ವಿಷ್ಣುವರ್ಧನ್ ಅವರಿಗೂ ಗೌರವ ಸಿಗಬೇಕು ಎಂದಿರುವ ಅನಿರುದ್ಧ, ಫಿಲಂ ಚೇಂಬರ್‍ನಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿ ಇಲ್ಲ. ಏಕೆ ಅನ್ನೋದನ್ನೂ ಪ್ರಶ್ನಿಸಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery