` ಅಗಲಿದ ಗೆಳೆಯ : ಸಂಭ್ರಮವನ್ನೆಲ್ಲಾ ದೂರವಿಟ್ಟ ನೀನಾಸಂ ಸತೀಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಗಲಿದ ಗೆಳೆಯ : ಸಂಭ್ರಮವನ್ನೆಲ್ಲಾ ದೂರವಿಟ್ಟ ನೀನಾಸಂ ಸತೀಶ್
Sathish Ninasam

ನೀನಾಸಂ ಸತೀಶ್ ಮತ್ತು ಸಂಚಾರಿ ವಿಜಯ್ ಇಬ್ಬರೂ ಪರಮಾಪ್ತ ಗೆಳೆಯರು. ವಿಜಯ್ ಅಂತಿಮ ಕ್ಷಣಗಳಲ್ಲಿ ಜೊತೆಯಲ್ಲಿ ನಿಂತಿದ್ದ ಸತೀಶ್, ಗೆಳೆಯನ ಅಗಲಿಕೆಯ ನೋವಿನಿಂದ ಹೊರಬಂದಿಲ್ಲ. ವಿಜಯ್ ಅಗಲಿಕೆ ಬೆನ್ನಲ್ಲೇ ಅವರ ಹುಟ್ಟುಹಬ್ಬವೂ ಇತ್ತು. ಜೂನ್ 20ರಂದು ಸತೀಶ್ ಅವರ ಹುಟ್ಟುಹಬ್ಬ.

ಸತೀಶ್ ಅವರ ಹುಟ್ಟುಹಬ್ಬಕ್ಕೆಂದೇ ಅವರ ಚಿತ್ರಗಳ ತಂಡದವರು ಸ್ಪೆಷಲ್ ಪ್ಲಾನ್ ಮಾಡಿಕೊಂಡಿದ್ದರು. ಪೆಟ್ರೋಮ್ಯಾಕ್ಸ್ ಚಿತ್ರದ ಟೀಸರ್ ರಿಲೀಸ್ ಆಗಬೇಕಿತ್ತು. ಬೇರೆ ಬೇರೆ ಚಿತ್ರಗಳ ತಂಡದವರೂ ವಿಶೇಷ ಯೋಜನೆ ರೂಪಿಸಿಕೊಂಡಿದ್ದರು. ಅವೆಲ್ಲಕ್ಕೂ ಸತೀಶ್ ಬ್ರೇಕ್ ಹಾಕಿದ್ದಾರೆ. ಹುಟ್ಟುಹಬ್ಬದ ಆಚರಣೆಯನ್ನೂ ನಿಲ್ಲಿಸಿದ್ದಾರೆ. ಜೂನ್ 20ರಂದು ಸತೀಶ್, ಹರಿಪ್ರಿಯಾ, ವಿಜಯ್ ಪ್ರಸಾದ್ ಕಾಂಬಿನೇಷನ್‍ನ ಪೆಟ್ರೋಮ್ಯಾಕ್ಸ್ ಟೀಸರ್ ರಿಲೀಸ್ ಆಗುತ್ತಿಲ್ಲ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery