` ಕೆ.ಸಿ.ಎನ್. ಚಂದ್ರು : ಕನ್ನಡಿಗರು ಸದಾ ನೆನಪಿಡಬೇಕಾದ ನಿರ್ಮಾಪಕ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕೆ.ಸಿ.ಎನ್. ಚಂದ್ರು : ಕನ್ನಡಿಗರು ಸದಾ ನೆನಪಿಡಬೇಕಾದ ನಿರ್ಮಾಪಕ
KCN Chandrashekar Image

ಕೆಸಿಎನ್ ಚಂದ್ರಶೇಖರ್. ಕೆಸಿಎನ್ ಚಂದ್ರು ಎಂದೇ ಚಿರಪರಿಚಿತ. ದೊಡ್ಡಬಳ್ಳಾಪುರದವರು. ಕೃಷಿ ಮತ್ತು ರೇಷ್ಮೆ ಕೃಷಿಯಲ್ಲಿದ್ದ ಕುಟುಂಬ ಚಿತ್ರರಂಗಕ್ಕೆ ಬಂದಿದ್ದೇ ಒಂದು ಅಚ್ಚರಿ. ತಂದೆ ಕೆಸಿಎನ್ ಗೌಡರಿಂದಲೇ ಚಿತ್ರರಂಗದ ಜೊತೆ ಗುರುತಿಸಿಕೊಂಡ ಕುಟುಂಬವಿದು. ಕೆಸಿಎನ್ ಚಂದ್ರಶೇಖರ್ ಅವರ ತಂದೆ ಕೆಸಿ ನಂಜುಂಡೇ ಗೌಡರು ಕನ್ನಡ ಚಿತ್ರರಂಗದ ಅಪರೂಪದ ಚಿತ್ರಗಳಾದ ಬಂಗಾರದ ಮನುಷ್ಯ, ಸತ್ಯ ಹರಿಶ್ಚಂದ್ರ, ಬಭ್ರುವಾಹನ, ದಾರಿ ತಪ್ಪಿದ ಮಗ..ದಂತಾ ಚಿತ್ರಗಳನ್ನು ನಿರ್ಮಿಸಿದವರು. ಮಗ ಕೆಸಿಎನ್ ಚಂದ್ರು ಕೂಡಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಡಾ.ರಾಜ್ ಚಿತ್ರದ ಮೂಲಕವೇ.

ಪಾರ್ವತಮ್ಮ ರಾಜ್‍ಕುಮಾರ್ ನಿಮಾರ್ಣದ ಶಂಕರ್ ಗುರು ಚಿತ್ರದಲ್ಲಿ ಸಹ ನಿರ್ಮಾಪಕರಾಗಿ ಬಂದ ಕೆಸಿಎನ್ ಚಂದ್ರು, ನಂತರ ಡಾ.ರಾಜ್ ಅವರ ಜೊತೆ ಹುಲಿಯ ಹಾಲಿನ ಮೇವು, ಕಸ್ತೂರಿ ನಿವಾಸ, ದೂರದ ಬೆಟ್ಟ,  ಮೊದಲಾದ ಕ್ಲಾಸಿಕ್‍ಗಳನ್ನು ಕೊಟ್ಟರು. ಶರಪಂಜರ, ಧರ್ಮಯುದ್ಧ, ಭಕ್ತ ಜ್ಞಾನದೇವ, ಅಂತ, ಅಜಿತ್, ಇಂದಿನ ಭಾರತ, ಸ್ನೇಹ ಸಂಬಂಧ, ಅಸಂಭವ, ನವಭಾರತ, ರಾಮರಾಜ್ಯದಲ್ಲಿ ರಾಕ್ಷಸರು, ಚಂದು, ಮಸಾಲಾ, ಸಾರಥಿ.. ಹೀಗೆ.. 50ಕ್ಕೂ ಹೆಚ್ಚು ಸಿನಿಮಾಗಳ ಸೃಷ್ಟಿಕರ್ತ. ಕೆಸಿಎನ್ ಅವರ ರಾಜ್‍ಕಮಲ್ ಆಟ್ರ್ಸ್ ಬ್ಯಾನರ್, ಕನ್ನಡದ ವಜ್ರೇಶ್ವರಿ, ಈಶ್ವರಿಯಂತಾ ದೊಡ್ಡ ದೊಡ್ಡ ಸಂಸ್ಥೆಗಳ ಸಾಲಿನಲ್ಲಿ ನಿಲ್ಲುವಂತದ್ದು. ನಿರ್ಮಾಪಕರಾಗಿಯಷ್ಟೇ ಅಲ್ಲ, ಒಳ್ಳೆಯ ಚಿತ್ರಗಳಿಗೆ ಫೈನಾನ್ಸ್ ಕೂಡಾ ಮಾಡುತ್ತಿದ್ದ ಕೆಸಿಎನ್ ಚಂದ್ರು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರೂ ಆಗಿದ್ದವರು. ವಿತರಕರೂ ಆಗಿದ್ದರು.

 

--

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery