` ಸಂಚಾರಿ ವಿಜಯ್ ಸಾವಿನ ನಂತರವೂ ಬದುಕಲಿದ್ದಾರೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸಂಚಾರಿ ವಿಜಯ್ ಸಾವಿನ ನಂತರವೂ ಬದುಕಲಿದ್ದಾರೆ..!
Sanchari Vijay

ಸಂಚಾರಿ ವಿಜಯ್ ಅವರ ಅಕಾಲಿಕ ದುರ್ಮರಣ ಕನ್ನಡ ಚಿತ್ರರಂಗವನ್ನು ಶಾಕ್‍ನಲ್ಲಿಟ್ಟಿದೆ. ಅದು ಅನಿರೀಕ್ಷಿತವಾಗಿತ್ತು. ಕೋವಿಡ್ ಸಂಕಷ್ಟದಲ್ಲಿ ಜನರ ನೆರವಿಗೆ ನಿಂತಿದ್ದ ವಿಜಯ್, ಆ ದಿನ ರಾತ್ರಿಯೂ ಅಷ್ಟೆ, ಗೆಳೆಯರೊಬ್ಬರ ಮನೆಯಲ್ಲಿ ಮುಂದಿನ ಸೇವಾಕಾರ್ಯಗಳ ರೂಪುರೇಷೆಗಳ ಕುರಿತು ಚರ್ಚಿಸಲು ಹೋಗಿದ್ದರಂತೆ. ಅಲ್ಲಿಂದ ವಾಪಸ್ ಬರುವಾಗ ಬೈಕ್ ಸ್ಕಿಡ್ ಆಗಿ ಬಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಅಕಸ್ಮಾತ್ ಹೆಲ್ಮೆಟ್ ಧರಿಸಿದ್ದರೆ.. ಅದೆಲ್ಲ ಈಗ ಮುಗಿದು ಹೋದ ಮಾತು. ಒಂದಂತೂ ಸತ್ಯ. ಹೆಲ್ಮೆಟ್ ಧರಿಸಿದ್ದರೆ, ಪ್ರಾಣ ಉಳಿಯುತ್ತಿತ್ತು ಎನ್ನುತ್ತಾರೆ ವೈದ್ಯರು. ಇದೆಲ್ಲದರ ನಡುವೆಯೂ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ವಿಜಯ್.

ಸೋಮವಾರ ರಾತ್ರಿ 8.30ರ ಸುಮಾರಿಗೆ ಸುದ್ದಿಗೋಷ್ಟಿ ನಡೆಸಿದ ಅಪೋಲೋ ಆಸ್ಪತ್ರೆ ವೈದ್ಯರು ವಿಜಯ್ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದರು. ಪವಾಡ ನಡೆಯಲಿಲ್ಲ.  ಎರಡು ಬಾರಿ ಅಪ್ನಿಯಾ ಪರೀಕ್ಷೆ ನಡೆಸಿದ ಮೇಲೂ ಪಾಸಿಟಿವ್ ರಿಪೋರ್ಟ್ ಬಂತು. ಅದರರ್ಥ, ವಿಜಯ್ ಅವರ ಮೆದುಳು ನಿಷ್ಕ್ರಿಯಗೊಂಡಿದೆ.

ವಿಜಯ್ ಮೃತಪಟ್ಟಿದ್ದರೂ, ಅಂಗಾಂಗ ದಾನ ಮಾಡಿದ ಹಿನ್ನೆಲೆಯಲ್ಲಿ ಅವರ ಲಿವರ್, ಎರಡೂ ಕಿಡ್ನಿ, ಹೃದಯದ ಎರಡು ಹಾರ್ಟ್ ವಾಲ್ವ್, ಕಣ್ಣುಗಳು ಜೀವಂತವಾಗಿರಲಿವೆ. ಹೃದಯದ ವಾಲ್ಟ್ ಮತ್ತು ಲಿವರ್‍ನ್ನು ಶೀಘ್ರವಾಗಿ ಕಸಿ ಮಾಡಬೇಕು. ಕಣ್ಣುಗಳು ಮತ್ತು ಕಿಡ್ನಿಗಳನ್ನು ಸುರಕ್ಷಿತವಾಗಿಟ್ಟು, ನಂತರ ಡಿಎನ್‍ಎ. ಬ್ಲಡ್ ಗ್ರೂಪ್ ಮ್ಯಾಚ್ ಆಗುವವರಿಗೆ ಕಸಿ ಮಾಡಲಾಗುವುದು. ಜೀವ ಸಾರ್ಥಕತೆ ತಂಡದ ಮೂಲಕ ಅಗತ್ಯವಿದ್ದವರಿಗೆ ಅವುಗಳನ್ನು ಟ್ರಾನ್ಸ್‍ಪ್ಲಾಂಟ್ ಮಾಡಲಾಗುವುದು. ವಿಜಯ್ ಅವರ ಅಂಗಾಂಗಗಳನ್ನು ಕಸಿ ಪಡೆದವರ ಮೂಲಕ ವಿಜಯ್ ಜೀವಂತವಾಗಿರಲಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery