` ಡೆಡ್ಲಿ3 ಅಖಾಡ ಸಿದ್ಧ ಮಾಡಿದ ರವಿ ಶ್ರೀವತ್ಸ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಡೆಡ್ಲಿ3 ಅಖಾಡ ಸಿದ್ಧ ಮಾಡಿದ ರವಿ ಶ್ರೀವತ್ಸ
Ravi Srivatsav

ಡೆಡ್ಲಿ ಸೋಮ. ನಿರ್ದೇಶಕ ರವಿ ಶ್ರೀವತ್ಸ ಮತ್ತು ನಟ ಆದಿತ್ಯ ಇಬ್ಬರಿಗೂ ದೊಡ್ಡ ಹೆಸರು ತಂದುಕೊಟ್ಟ ಸಿನಿಮಾ. ಡೆಡ್ಲಿ ಸೋಮ ನಂತರ ಡೆಡ್ಲಿ 2 ಸಿನಿಮಾದಲ್ಲೂ ಗೆದ್ದಿದ್ದ ರವಿ ಶ್ರೀವತ್ಸ ಈಗ ಡೆಡ್ಲಿ3 ಶುರು ಮಾಡುತ್ತಿದ್ದಾರೆ. ಹೀರೋ ಆಗಿ ಆದಿತ್ಯ ಇರಲ್ಲ. ದೀಕ್ಷಿತ್ ಎಂಬ ರವಿ ಶ್ರೀವತ್ಸ ಅವರೇ ಪರಿಚಯಿಸಲು ಹೊರಟಿದ್ದ ಕಲಾವಿದ ಇರುತ್ತಾರೆ.

ಮುತ್ತಪ್ಪ ರೈ ಜೀವನ ಕಥೆಯನ್ನು ಸಿನಿಮಾ ಮಾಡಲು ಹೊರಟಿದ್ದ ರವಿ ಶ್ರೀವತ್ಸ, ಅದಕ್ಕೆ ಎಂಆರ್ ಎಂಬ ಟೈಟಲ್‍ನ್ನೂ ಇಟ್ಟಿದ್ದರು. ಆದರೆ ಅದ್ಯಾವ ನಾಯಿ ಕಣ್ಣೋ.. ನರಿ ಕಣ್ಣೋ.. ಸಿನಿಮಾ ಮುಹೂರ್ತ ಮಾಡಿಕೊಂಡ ಕೆಲವೇ ದಿನಗಳಲ್ಲಿ ಆ ಸಿನಿಮಾಗೆ ಕೆಲವರು ಸಮಾಧಿ ಕಟ್ಟಿಬಿಟ್ಟರು. ಅದಾದ ಮೇಲೆ ಡಿಆರ್ ಸಿನಿಮಾ ಮಾಡೋಕೆ ಹೊರಟೆವು. ಅದಕ್ಕೂ ಕಲ್ಲು ಬಿತ್ತು. ಇಲ್ಲಸಲ್ಲದ ಗಲಾಟೆಗಳನ್ನೆಲ್ಲ ಮಾಡಿಕೊಂಡು ನಾನ್ಯಾಕೆ ಸಿನಿಮಾ ಮಾಡಲಿ. ಹೀಗಾಗಿಯೇ ಡೆಡ್ಲಿ3 ಸಿನಿಮಾ ಮಾಡುತ್ತಿದ್ದೇನೆ. ನನ್ನ ಹೀರೋ ದೀಕ್ಷಿತ್ ಹುಟ್ಟುಹಬ್ಬದ ದಿನ ಚಿತ್ರದ ಫಸ್ಟ್ ಲುಕ್ ಲಾಂಚ್ ಮಾಡುತ್ತಿದ್ದೇನೆ ಎಂದು ಘೋಷಿಸಿದ್ದಾರೆ ರವಿ ಶ್ರೀವತ್ಸ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery