` ಕೆಜಿಎಫ್ ಚಾಪ್ಟರ್ 2 ಮತ್ತೊಂದು ದಾಖಲೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕೆಜಿಎಫ್ ಚಾಪ್ಟರ್ 2 ಮತ್ತೊಂದು ದಾಖಲೆ
KGF Chapter 2 Image

ಕೆಜಿಎಫ್ ಚಾಪ್ಟರ್ 2 ರಿಲೀಸ್ ಯಾವಾಗ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಅತ್ತ ಲಾಕ್‍ಡೌನ್ ಮತ್ತು ಕೊರೊನಾ ತೊಲಗುವ ಲಕ್ಷಣ ಕಾಣಿಸುತ್ತಿಲ್ಲ. ಅಭಿಮಾನಿಗಳ ಕನವರಿಕೆಯೂ ನಿಂತಿಲ್ಲ. ಇದರ ನಡುವೆಯೇ ಕೆಜಿಎಫ್ ಚಾಪ್ಟರ್ 2 ಮತ್ತೊಂದು ದಾಖಲೆ ಬರೆದಿದೆ.

ಯೂಟ್ಯೂಬ್‍ನಲ್ಲಿ ಈಗಾಗಲೇ 18 ಕೋಟಿ ವೀಕ್ಷಣೆ ಪಡೆದಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಟ್ರೇಲರ್, ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಜನ ವೀಕ್ಷಿಸಿದ ಟ್ರೇಲರ್ ಎಂಬ ದಾಖಲೆ ಬರೆದಿದೆ.

ಈಗ ಈ ಚಿತ್ರದ ಟ್ರೇಲರ್‍ಗೆ 10 ಲಕ್ಷಕ್ಕೂ ಹೆಚ್ಚು ಜನ ಕಮೆಂಟ್ಸ್ ಮಾಡಿದ್ದಾರೆ. ಇದೂ ಕೂಡಾ ದಾಖಲೆಯೇ.

ಬುಕ್ ಮೈ ಶೋನಲ್ಲಿ ಮತ್ತು ಸಿನಿಮಾ ಪ್ರೇಕ್ಷಕರ ಸಮೀಕ್ಷೆಯಲ್ಲಿ ಈ ವರ್ಷ ಅತೀ ಹೆಚ್ಚು ಜನ ನೋಡಲು ಬಯಸಿರುವ ಚಿತ್ರ ಕೆಜಿಎಫ್ ಚಾಪ್ಟರ್ 2. ಒಟ್ಟಿನಲ್ಲಿ ರಿಲೀಸ್‍ಗೂ ಮೊದಲು ದಾಖಲೆಗಳ ಸುರಿಮಳೆಯನ್ನೇ ಸುರಿಸುತ್ತಿರುವ ಹೊಂಬಾಳೆ ಬ್ಯಾನರ್‍ನ ಕೆಜಿಎಫ್ ಚಾಪ್ಟರ್ 2, ರಿಲೀಸ್ ಆದ ನಂತರ ಮುರಿಯಬೇಕಾದ ದಾಖಲೆಗಳ ಪಟ್ಟಿಯೇ ಮೈಲುದ್ದ ಇದೆ.