` ರವಿಚಂದ್ರನ್ 3 ಹೊಸ ಸಿನಿಮಾ ಘೋಷಣೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರವಿಚಂದ್ರನ್ 3 ಹೊಸ ಸಿನಿಮಾ ಘೋಷಣೆ
Ravichandran Image

ಒಂದು ಕಾಲವಿತ್ತು. ರವಿಚಂದ್ರನ್ ಹುಟ್ಟುಹಬ್ಬದ ದಿನ ಕನಿಷ್ಠ 10 ಸಿನಿಮಾಗಳು ಘೋಷಣೆಯಾಗುತ್ತಿದ್ದವು. ಆದರೆ ಇತ್ತೀಚೆಗೆ ಸ್ವತಃ ರವಿಚಂದ್ರನ್ ಅಂತಹ ಹೊಸ ಸಿನಿಮಾ ಘೋಷಣೆಗಳಿಗೆ ಬ್ರೇಕ್ ಹಾಕಿಕೊಂಡಿದ್ದರು. ಈ ಬಾರಿ ಹಳೆಯ ರವಿ ಮತ್ತೆ ಮರಳಿದ್ದಾರೆ. 3 ಹೊಸ ಸಿನಿಮಾದ ಘೋಷಣೆ ಮಾಡಿದ್ದಾರೆ.

ಗಾಡ್, ಬ್ಯಾಡ್ ಬಾಯ್ ಮತ್ತು 6ಟಿ ಎಂಬುವ 3 ಚಿತ್ರಗಳ ಘೋಷಣೆಯಾಗಿದೆ. ಇವುಗಳಲ್ಲಿ 6ಟಿ ಚಿತ್ರಕ್ಕೆ ರವಿಚಂದ್ರನ್ ಅವರ ಕನ್ನಡಿಗ ಚಿತ್ರದಲ್ಲಿ ನಟಿಸಿರುವ ಪಾವನಿಯೇ ಹೀರೋಯಿನ್. ಉಳಿದಂತೆ ರವಿಚಂದ್ರನ್ ರವಿ ಬೋಪಣ್ಣ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅದು ಬಿಡುಗಡೆಯಾಗಬೇಕಿದೆ. ಜಟ್ಟ ಗುರುರಾಜ್ ನಿರ್ದೇಶನದ ಕನ್ನಡಿಗ ಚಿತ್ರವೂ ರಿಲೀಸ್ ಆಗಬೇಕಿದೆ. ಇವುಗಳ ನಡುವೆ ದೃಶ್ಯ 2 ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ ರವಿಚಂದ್ರನ್. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery