` `ಉಸಿರು' ಜೊತೆ ಕೈಜೋಡಿಸಿದ ದರ್ಶನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
`ಉಸಿರು' ಜೊತೆ ಕೈಜೋಡಿಸಿದ ದರ್ಶನ್
`ಉಸಿರು' ಜೊತೆ ಕೈಜೋಡಿಸಿದ ದರ್ಶನ್

ಉಸಿರು. ಚಲನಚಿತ್ರರಂಗದ ಕೆಲವು ಕಲಾವಿದರು, ನಿರ್ದೇಶಕರೇ ಸೇರಿಕೊಂಡು ಕೆಲಸ ಮಾಡುತ್ತಿರುವ ಸಂಸ್ಥೆ ಇದು. ಈ ಸಂಸ್ಥೆ ಆಮ್ಲಜನಕದ ಅಗತ್ಯ ಇರುವವರ ಮನೆಗೇ ಆಮ್ಲಜನಕ ಪೂರೈಸುವ ಕೆಲಸ ಮಾಡುತ್ತಿದೆ. ಕವಿರಾಜ್, ಸಾಧುಕೋಕಿಲ, ಕವಿತಾ ಲಂಕೇಶ್, ಸಂಚಾರಿ ವಿಜಯ್, ನೀತು ಶೆಟ್ಟಿ, ಸುಂದರ್ ಸೇರಿದಂತೆ ಹಲವರು ಈ ತಂಡದಲ್ಲಿದ್ದಾರೆ. ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದೆ.

ಈ ಸಂಸ್ಥೆಗೀಗ ಗಜ ಬಲ ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಉಸಿರು ತಂಡದ ಸೇವೆಗೆ ಕೈ ಜೋಡಿಸಿದ್ದಾರೆ. ಲಾಕ್ ಡೌನ್ ಶುರುವಾದಾಗಿನಿಂದ ಮೈಸೂರಿನ ತಮ್ಮ ಫಾರ್ಮ್‍ನಲ್ಲೇ ಬೀಡುಬಿಟ್ಟಿರುವ ದರ್ಶನ್, ಮೈಸೂರಿನಲ್ಲಿ ಉಸಿರು ತಂಡದ ಕಾರ್ಯಾಚರಣೆಗೆ ಕೈ ಜೋಡಿಸಿದ್ದಾರೆ. ಆಮ್ಲಜನಕದ ಅಗತ್ಯ ಇರುವವರು ಉಸಿರು ಸಹಾಯವಾಣಿಗೆ ಕರೆ ಮಾಡಿದರೆ ಉಸಿರು ತಂಡ ತಕ್ಷಣ ನೆರವಿಗೆ ಧಾವಿಸಲಿದೆ.