ದರ್ಶನ್ ಚಿತ್ರಗಳಲ್ಲಿ ಮ್ಯೂಸಿಕಲಿ ಹಿಟ್ ಸಾಲಿನಲ್ಲಿರುವ ಚಿತ್ರ ಲಾಲಿಹಾಡು. ಆ ಚಿತ್ರದಲ್ಲಿ ದರ್ಶನ್‍ಗೆ ನಾಯಕಿಯಾಗಿದ್ದ ಅಭಿರಾಮಿ ಮತ್ತೊಮ್ಮೆ ವಾಪಸ್ ಬಂದಿದ್ದಾರೆ. ಸುದೀಪ್‍ಗೆ ತಾಯಿಯಾಗಿ.
ಕೋಟಿಗೊಬ್ಬ 3 ಚಿತ್ರದಲ್ಲಿ ಅಭಿರಾಮಿ ಸುದೀಪ್ ಅವರಿಗೆ ತಾಯಿಯಾಗಿ ನಟಿಸಿದ್ದಾರೆ. ಮಲಯಾಳಂ ಮೂಲದ ಅಭಿರಾಮಿ ವಿದೇಶದಲ್ಲಿ ಸೆಟಲ್ ಆಗಿದ್ದರು. ಕನ್ನಡದಲ್ಲಿ ಅಭಿರಾಮಿ ಕಡೆಯದಾಗಿ ದಶರಥ ಚಿತ್ರದಲ್ಲಿ ನಟಿಸಿದ್ದರು. ಈಗ ಕೋಟಿಗೊಬ್ಬ 3 ಚಿತ್ರದಲ್ಲಿ ನಟಿಸುತ್ತಿದ್ದು, ಸುದೀಪ್ ಅವರ ತಾಯಿಯ ಪಾತ್ರ ಮಾಡಿದ್ದಾರಂತೆ.