` ಚಿತ್ರರಂಗದ ಕಾರ್ಮಿಕರಿಗೆ ಉಪೇಂದ್ರ, ಸುದೀಪ್, ಲೀಲಾವತಿ ನೆರವು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಚಿತ್ರರಂಗದ ಕಾರ್ಮಿಕರಿಗೆ ಉಪೇಂದ್ರ, ಸುದೀಪ್, ಲೀಲಾವತಿ ನೆರವು
Upendra, Leelavathi, Sudeep

ಕನ್ನಡ ಚಲನಚಿತ್ರರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೆ ಕೋವಿಡ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಎಲ್ಲ ಸಂಘಗಳ ಸುಮಾರು 3 ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದೇನೆ. ಇದು ಉಪೇಂದ್ರ ಅವರ ಘೋಷಣೆ.

`ಕಿಚ್ಚನ ಕೈತುತ್ತು' ಇದು ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್‍ನ ಹೊಸ ಯೋಜನೆ. ಕೊರೊನಾ ವಾರಿಯರ್ಸ್, ಕಷ್ಟದಲ್ಲಿರುವ ಕಲಾವಿದರಿಗೆ ಊಟ, ಆಕ್ಸಿಜನ್ ಸಿಲಿಂಡರ್ ವಿತರಣೆ.. ಹೀಗೆ ಹಲವು ಯೋಜನೆಗಳನ್ನು ಸುದೀಪ್ ಈಗಾಗಲೇ ಆರಂಭಿಸಿಬಿಟ್ಟಿದ್ದಾರೆ.

ಅತ್ತ ಹಿರಿಯ ನಟಿ ಲೀಲಾವತಿ ಸುಮಾರು 200 ಮಂದಿ ಹಿರಿಯ ಕಲಾವಿದರಿಗೆ ದಿನಸಿ ಕಿಟ್ ವಿತರಿಸಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery