` ಸಿಕ್ಸ್ತ್ ಸೆನ್ಸ್ ಸೀನ ವಿನಯ್ ರಾಜ್‍ಕುಮಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಸಿಕ್ಸ್ತ್ ಸೆನ್ಸ್ ಸೀನ ವಿನಯ್ ರಾಜ್‍ಕುಮಾರ್
Vinay Rajkumar

ವಿನಯ್ ರಾಜ್‍ಕುಮಾರ್ ನಟಿಸಿರುವ ಹೊಸ ಸಿನಿಮಾ ಗ್ರಾಮಾಯಣ. ಚಿತ್ರದ ನಿರ್ಮಾಪಕರು ಮೃತಪಟ್ಟ ಹಿನ್ನೆಲೆಯಲ್ಲಿ ಚಿತ್ರ ನಿಂತೇಹೋಯ್ತು ಎನ್ನುತ್ತಿರುವಾಗ ಚಿತ್ರದ ಇನ್ನೊಂದು ಸ್ವಾರಸ್ಯವನ್ನು ರಿವೀಲ್ ಮಾಡಿದೆ ಚಿತ್ರತಂಡ. ವಿನಯ್ ರಾಜ್‍ಕುಮಾರ್ ಅವರ ಪಾತ್ರದ ಹೆಸರು ಸಿಕ್ಸ್ತ್‍ಸೆನ್ಸ್ ಸೀನ ಎನ್ನುವ ವಿಷಯ ಬಹಿರಂಗವಾಗಿದೆ.

ದಾಡಿ, ಲುಂಗಿಯ ರಗಡ್ ಲುಕ್‍ನಲ್ಲಿ ವಿನಯ್ ರಾಜ್‍ಕುಮಾರ್ ಗಮನ ಸೆಳೆದಿದ್ದಾರೆ. ಅಮೃತಾ ಅಯ್ಯರ್ ನಾಯಕಿಯಾಗಿರುವ ಚಿತ್ರದಲ್ಲಿರೋ ಪಕ್ಕಾ ಹಳ್ಳಿ ಸ್ಟೋರಿ. ಚಿತ್ರೀಕರಣ ಬಹುತೇಕ ಮುಗಿಯುತ್ತಿರುವ ಹೊತ್ತಿನಲ್ಲಿ ಶುರುವಾದ ಲಾಕ್‍ಡೌನ್‍ನಿಂದಾಗಿ ಚಿತ್ರ ಅಲ್ಲಿಯೇ ನಿಂತಿದೆ. ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ ಲಾಕ್ ಡೌನ್ ಮುಗಿದ ನಂತರ ಎಲ್ಲವನ್ನೂ ಪೂರೈಸಿಕೊಂಡು ಜನರ ಮುಂದೆ ಬರುವ ಉತ್ಸಾಹದಲ್ಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery