` ಕವಿರತ್ನ ಕಾಳಿದಾಸ ನಿರ್ದೇಶಕ ರೇಣುಕಾಶರ್ಮ ಕೋವಿಡ್'ಗೆ ಬಲಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
meet the prime suspect behind bangalore drug mafia
Director Renuka Sharma

ಕೋವಿಡ್ ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಜೀವವನ್ನು ಬಲಿ ತೆಗೆದುಕೊಂಡಿದೆ. ಕನ್ನಡದ ಐತಿಹಾಸಿಕ ಮತ್ತು ಹಲವಾರು ಕ್ಲಾಸಿಕ್ ಚಿತ್ರಗಳನ್ನು ನಿರ್ದೇಶಿಸಿದ್ದ ರೇಣುಕಾಶರ್ಮ ಕೋವಿಡ್‍ನಿಂದಾಗಿ ಮೃತಪಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಕೋವಿಡ್‍ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ರೇಣುಕಾಶರ್ಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಲೋ ಬಿಪಿಯಿದ್ದ ಕಾರಣದಿಂದಾಗಿ ತೀವ್ರ ಉಸಿರಾಟದ ತೊಂದರೆಗೂ ತುತ್ತಾಗಿದ್ದರು ರೇಣುಕಾಶರ್ಮ. ಹೀಗಾಗಿಯೇ ಕೊರೊನಾ ಪಾಸಿಟಿವ್ ಬಂದ ನಂತರ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. 2008ರಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಪಾತ್ರರಾಗಿದ್ದ ರೇಣುಕಾಶರ್ಮ ಇನ್ನು ನೆನಪು ಮಾತ್ರ.

ಅನುಪಮ ಚಿತ್ರದ ಮೂಲಕ ನಿರ್ದೇಶಕರಾದ ರೇಣುಕಾಶರ್ಮ, ಕವಿರತ್ನ ಕಾಳಿದಾಸ, ಶಬರಿಮಲೆ ಸ್ವಾಮಿ ಅಯ್ಯಪ್ಪ, ಅಂಜದಗಂಡು, ಕಿಂದರಿಜೋಗಿ, ಕೊಲ್ಲೂರು ಶ್ರೀಮೂಕಾಂಬಿಕಾ, ಮಹಾಸಾಧ್ವಿ ಮಲ್ಲಮ್ಮ, ಹಠಮಾರಿ ಹೆಣ್ಣು ಕಿಲಾಡಿ ಗಂಡು, ಸತ್ಕಾರ, ಶಭಾಶ್ ವಿಕ್ರಂ.. ಹೀಗೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery