` ಅಪ್ಪ ಅಡ್ಮಿಟ್ ಆಗಿರುವ ಆಸ್ಪತ್ರೆಯಲ್ಲೇ ನಿಖಿಲ್ ಕೂಡಾ ಅಡ್ಮಿಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಪ್ಪ ಅಡ್ಮಿಟ್ ಆಗಿರುವ ಆಸ್ಪತ್ರೆಯಲ್ಲೇ ನಿಖಿಲ್ ಕೂಡಾ ಅಡ್ಮಿಟ್
Nikhil Kumaraswamy

ನಿಖಿಲ್ ಕುಮಾರಸ್ವಾಮಿ ಅವರ ಕೋವಿಡ್ ರಿಪೋರ್ಟ್ ಪಾಸಿಟಿವ್ ಬಂದಿದೆ. ವಿವಾಹ ವಾರ್ಷಿಕೋತ್ಸವ ದಿನವೇ ಪಾಸಿಟಿವ್ ರಿಪೋರ್ಟ್ ಬಂದಿತ್ತು. ಮಾಜಿ ಸಿಎಂ ಕುಮಾರಸ್ವಾಮಿಯವರಿಗೂ ಪಾಸಿಟಿವ್ ರಿಪೋರ್ಟ್ ಇದ್ದ ಕಾರಣ, ಇಡೀ ಕುಟುಂಬ ಒಂದರ್ಥದಲ್ಲಿ ಶಾಕ್‍ನಲ್ಲಿಯೇ ಇತ್ತು. ಇತ್ತೀಚೆಗಷ್ಟೇ ದೇವೇಗೌಡ, ಚಿನ್ನಮ್ಮ ಗುಣಮುಖರಾಗಿದ್ದರು.

ಪಾಸಿಟಿವ್ ಆದ ನಂತರ ಮನೆಯಲ್ಲೇ ಐಸೋಲೇಷನ್‍ನಲ್ಲಿದ್ದ ನಿಖಿಲ್, ಒಂದು ದಿನದ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಕುಮಾರಸ್ವಾಮಿ ಇರೋ ಅಪೋಲೋ ಆಸ್ಪತ್ರೆಯಲ್ಲೇ ಅಡ್ಮಿಟ್ ಆಗಿದ್ದಾರೆ. ನಿಖಿಲ್ ಅವರಿಗೆ ಸಂಬಂಧಿಯೂ ಆಗಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ಡಾ.ಮಂಜುನಾಥ್ ಸಲಹೆ ಮೇರೆಗೆ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ ನಿಖಿಲ್. ನಿಖಿಲ್ ಅವರಿಗೆ ತಲೆನೋವಿನ ಜೊತೆ ಜ್ವರವೂ ಕಾಣಿಸಿಕೊಂಡ ಕಾರಣ ಆಸ್ಪತ್ರೆ ಸೇರಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery