` ರವಿ ಬೋಪಣ್ಣ ರೆಡಿ : ಬಂತೂ ಬಂತು ಟ್ರೇಲರ್ ಬಂತು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ರವಿ ಬೋಪಣ್ಣ ರೆಡಿ : ಬಂತೂ ಬಂತು ಟ್ರೇಲರ್ ಬಂತು
Ravi Boppana Movie Image

ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತೆ ಬಂದಿದ್ದಾರೆ. ಮತ್ತೊಮ್ಮೆ ಕತ್ತಲು ಬೆಳಕು ಬಣ್ಣ ಬೆಂಕಿಯ ಜೊತೆ ಆಟವಾಡಿದ್ದಾರೆ. ರವಿ ಬೋಪಣ್ಣ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾ ರೆಡಿ ಇದೆ. ಇದೊಂದು ಸಸ್ಪೆನ್ಸ್ ಸಿನಿಮಾ. ಸಿನಿಮಾ ನೋಡುವಷ್ಟೂ ಹೊತ್ತು ಕುತೂಹಲ ಬೆಳೆಸುತ್ತಾ ಹೋಗುತ್ತೆ ಎಂದು ಪ್ರಾಮಿಸ್ ಮಾಡಿದ್ದಾರೆ ರವಿಚಂದ್ರನ್.

ರವಿ ಬೋಪಣ್ಣ ಚಿತ್ರದಲ್ಲಿ ರವಿಚಂದ್ರನ್ ಲುಕ್ ಸಖತ್ತಾಗಿದೆ. ಗೆಸ್ಟ್ ಅಪಿಯರೆನ್ಸ್ನಲ್ಲಿ ನಟಿಸಿರುವುದು ಕಿಚ್ಚ ಸುದೀಪ್. ಈಶ್ವರಿ ಸಂಸ್ಥೆಗೆ 50 ವರ್ಷ ತುಂಬಿದ ಸಂಭ್ರಮಕ್ಕೆ ಬಂದಿರೋದು ರವಿ ಬೋಪಣ್ಣ ಟ್ರೇಲರ್.

ಈ ಚಿತ್ರಕ್ಕೆ ನಿರ್ದೇಶಕ ಸ್ವತಃ ರವಿಚಂದ್ರನ್. ಟ್ರೇಲರ್ ನೋಡಿದವರಿಗೆ ಮಲಯಾಳಂನ ಫೊರೆನ್ಸಿಕ್ ಚಿತ್ರದ ಛಾಯೆ ಕಾಣಿಸುತ್ತಿದೆಯಾದರೂ, ಈಗಲೇ ಹೇಳೋದು ಕಷ್ಟ. ಅಕಸ್ಮಾತ್ ಇದು ರೀಮೇಕ್ ಆಗಿದ್ದರೆ, ರವಿಚಂದ್ರನ್ ಯಾವುದೇ ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುವವರು. ಸದ್ಯಕ್ಕೆ ಟ್ರೇಲರ್.. ಶೀಘ್ರದಲ್ಲೇ ಪಿಕ್ಚರ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery