` ದ್ವಾರಕೀಶ್ ಮೊದಲ ಪತ್ನಿ ಅಂಬುಜಾ ನಿಧನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ದ್ವಾರಕೀಶ್ ಮೊದಲ ಪತ್ನಿ ಅಂಬುಜಾ ನಿಧನ
Dwarkish Wife Ambuja Image

ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರಿಗೆ ಪತ್ನಿ ವಿಯೋಗವಾಗಿದೆ. ದ್ವಾರಕೀಶ್ ಅವರ ಮೊದಲ ಪತ್ನಿ ಅಂಬುಜಾ ವಯೋಸಹಜ ಕಾಯಿಲೆಗಳಿಂದಾಗಿ ಕೊನೆಯುಸಿರೆಳೆದಿದ್ದಾರೆ. ಜನವರಿಯಲ್ಲಷ್ಟೇ ಪತ್ನಿಯ ಹುಟ್ಟಿದ ಹಬ್ಬವನ್ನು ಪ್ರೀತಿಯಿಂದ ಆಚರಿಸಿದ್ದ ದ್ವಾರಕೀಶ್ ಅವರಿಗೆ ಇದು ಆಘಾತವೂ ಹೌದು.

ದ್ವಾರಕೀಶ್ ಅವರ ಬದುಕಿನ ಪ್ರತಿ ಏಳುಬೀಳಿನಲ್ಲಿ ಸಂಗಾತಿಯಾಗಿದ್ದವರು ಅಂಬುಜಾ. ಐವರು ಮಕ್ಕಳ ತಾಯಿ. ದ್ವಾರಕೀಶ್ ಅವರು ಮತ್ತೊಂದು ಮದುವೆಯಾದಾಗಲೂ ನಗು ನಗುತ್ತಲೇ ಮನೆ ತುಂಬಿಸಿಕೊಂಡಿದ್ದರು ಅಂಬುಜಾ. ದ್ವಾರಕೀಶ್ ಅವರ ಶಕ್ತಿಯೇ ಆಗಿದ್ದ ಅಂಬುಜಾ ಅಗಲಿಕೆಯಿಂದ ದ್ವಾರಕೀಶ್ ಮತ್ತು ಕುಟುಂಬ ಆದಷ್ಟು ಬೇಗ ಚೇತರಿಸಿಕೊಳ್ಳುವಂತಾಗಲಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery