` ಜಗನ್ಮೋಹಿನಿ ಪ್ರತಿಮಾದೇವಿ : ಕನ್ನಡದ ಮೊದಲ ಸ್ಟಾರ್ ನಟಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಜಗನ್ಮೋಹಿನಿ ಪ್ರತಿಮಾದೇವಿ : ಕನ್ನಡದ ಮೊದಲ ಸ್ಟಾರ್ ನಟಿ
Senior Actress Prathima Devi

ಜಗನ್ಮೋಹಿನಿ, ಪಾತಾಳ ಮೋಹಿನಿ.. ಇವೆಲ್ಲವೂ 50ರ ದಶಕದಲ್ಲಿ ಚಿತ್ರರಸಿಕರಿಗೆ ರೋಮಾಂಚನ ಮೂಡಿಸಿದ್ದ ಚಿತ್ರಗಳು. ಅವರ ಮೂಲ ಹೆಸರೇ ಮೋಹಿನಿ. ಹುಟ್ಟಿದ್ದು ಮೈಸೂರಿನಲ್ಲಿ. ಕನ್ನಡದಲ್ಲಿ ಮೊದಲು ಶತದಿನೋತ್ಸವ ಕಂಡ ಚಿತ್ರ ಜಗನ್ಮೋಹಿನಿಯ ನಾಯಕಿ ಮೋಹಿನಿ ಅಲಿಯಾಸ್ ಪ್ರತಿಮಾ ದೇವಿ.

ಅಪರೂಪದ ಸೌಂದರ್ಯ.. ಅದ್ಭುತ ಪ್ರತಿಭೆ.. ಅಮೋಘ ಎನ್ನಿಸುವ ಕಂಠಸಿರಿ.. ಎಲ್ಲವೂ ಇದ್ದ ಮೋಹಿನಿ ನಾಟಕಗಳ ಮೂಲಕವೇ ಚಿತ್ರರಂಗಕ್ಕೆ ಬಂದವರು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷದಲ್ಲಿ ಕೃಷ್ಣಲೀಲಾ ಚಿತ್ರದ ಮೂಲಕ ನಾಯಕಿಯಾದವರು. ಮಹಾತ್ಮಾ ಪಿಕ್ಚರ್ಸ್ ಸಂಸ್ಥೆಯ ಶಂಕರ್ ಸಿಂಗ್‍ರನ್ನು ಮದುವೆಯಾದರು. ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ವಿಜಯಲಕ್ಷ್ಮಿ ಸಿಂಗ್ ಇಬ್ಬರು ಮಕ್ಕಳು. ನಟಿಸಿದ ಕೊನೆಯ ಚಿತ್ರ ವಿಜಯಲಕ್ಷ್ಮಿ ಸಿಂಗ್ ನಿರ್ದೇಶಿಸಿದ್ದ ಯಾನ. ಮೊಮ್ಮಕ್ಕಳ ಜೊತೆಯಲ್ಲಿ ಕಾಣಿಸಿಕೊಂಡಿದ್ದರು ಪ್ರತಿಮಾ.

ವಯಸ್ಸು 88 ಆಗಿತ್ತಾದರೂ ಕಾಯಿಲೆಗಳಿಲ್ಲದ ಆರೋಗ್ಯವಂತ ಜೀವನ ಅವರದ್ದು. ಮಕ್ಕಳೆಲ್ಲ ಬೆಂಗಳೂರಿನಲ್ಲಿದ್ದರೂ, ಮೈಸೂರು ಬಿಟ್ಟು ಬರಲೇ ಇಲ್ಲ ಪ್ರತಿಮಾ ದೇವಿ. ಶಂಕರ್ ಸಿಂಗ್ ಬದುಕಿದ್ದಾಗ ಕಟ್ಟಿಸಿದ್ದ ಮನೆಯಲ್ಲಿ ರೆಡ್ ಆಕ್ಸಿಡ್ ನೆಲವಿತ್ತು. ಅದನ್ನು ಪತಿಯ ನೆನಪಿಗಾಗಿ ಹಾಗೆಯೇ ಬಿಟ್ಟಿದ್ದ ಪ್ರತಿಮಾ ದೇವಿ, ಅದನ್ನು ಬದಲಿಸಲೂ ಹೋಗಲಿಲ್ಲ. ಮೈಸೂರಿನ ಸರಸ್ವತಿಪುರಂನಲ್ಲಿತ್ತು ಅವರ ಮನೆ. ಮಹಾತ್ಮ ಪಿಕ್ಚರ್ಸ್ ಸಂಸ್ಥೆಯ ದೊಡ್ಡ ದೊಡ್ಡ ಸಾಧನೆಗಳ ಹಿಂದಿನ ಶಕ್ತಿಯಾಗಿದ್ದವರು ಇದೇ ಪ್ರತಿಮಾ ದೇವಿ.

ಕೆಂಪರಾಜ್ ಅರಸ್, ಢಿಕ್ಕಿ ಮಾಧವರಾವ್, ಉದಯ್ ಕುಮಾರ್, ಶ್ರೀನಿವಾಸ ರಾವ್ ರಂತಹಾ ಹೀರೋಗಳ ಜೊತೆ ನಟಿಸಿದ್ದರು. ಕನ್ನಡ ಚಿತ್ರರಂಗವಷ್ಟೇ ಅಲ್ಲ, ಜಗತ್ತಿನ ಫಿಲಂ ಇಂಡಸ್ಟ್ರಿಯೇ ಕಣ್ಣು ಬಿಡುತ್ತಿದ್ದ ಕಾಲದಲ್ಲಿ ಸ್ಟಾರ್ ನಟಿಯಾಗಿದ್ದವರು ಪ್ರತಿಮಾದೇವಿ. ಈಗಿಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery