` 100% ಅವಕಾಶ ಕೊಡಿ : ಕೆ.ಸುಧಾಕರ್‍ಗೆ ನಿರ್ಮಾಪಕರ ಸಂಘ ಮನವಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
100% ಅವಕಾಶ ಕೊಡಿ : ಕೆ.ಸುಧಾಕರ್‍ಗೆ ನಿರ್ಮಾಪಕರ ಸಂಘ ಮನವಿ
K Manju, Dr Sudhakar K

ಏಪ್ರಿಲ್ 7ಕ್ಕೆ ಅರ್ಥಾತ್ ಇವತ್ತಿಗೆ ಚಿತ್ರಮಂದಿರಗಳಲ್ಲಿ ಶೇ.100ರಷ್ಟು

ಪ್ರೇಕ್ಷಕರಿಗೆ ಅವಕಾಶ ಎಂಬ ನೀತಿ ಬದಲಾಗಲಿದೆ. ನಾಳೆಯಿಂದ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶ.  ಇದು ತೀರಾ ಅನ್ಯಾಯ. ಈಗಾಗಲೇ ಚಿತ್ರರಂಗ ಅರ್ಥಿಕ ಸಂಕಷ್ಟದಲ್ಲಿದೆ. ದಯವಿಟ್ಟು ಶೇ.50ರ ನಿರ್ಬಂಧ ವಾಪಸ್ ತೆಗೆದುಕೊಂಡು ಶೇ.100ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಬೇಕು ಎಂದು ನಿರ್ಮಾಪಕರ ಸಂಘ ಆಗ್ರಹಿಸಿದೆ. ನಿರ್ಮಾಪಕರ ಸಂಘದ ನಿಯೋಗ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ನಿಯೋಗದಲ್ಲಿ ನಿರ್ಮಾಪಕ ಕೆ.ಮಂಜು ಅವರೂ ಇದ್ದಿದ್ದು ವಿಶೇಷ. ಸುಧಾಕರ್ ಅವರ ಸಚಿವ ಸ್ಥಾನ ಬದಲಿಸಬೇಕು ಎಂದು ಒತ್ತಾಯಿಸಿದ್ದವರು ಮಂಜು. ಮಂಜು ಯಾರೋ ಗೊತ್ತೇ ಇಲ್ಲ ಎಂದಿದ್ದರು ಡಾ.ಕೆ.ಸುಧಾಕರ್.

ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿರುವ ಸುಧಾಕರ್, ಚಿತ್ರರಂಗದವರಿಗೆ ಯಾವುದೇ ರೀತಿಯ ಪಾಸಿಟಿವ್ ಭರವಸೆಗಳನ್ನೂ ನೀಡಿಲ್ಲ.